ನವದೆಹಲಿ,ಡಿ.19 : ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ ಪಾಟೀಲ್ ಅವರನ್ನು ಗುರುವಾರ ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ ಮತ್ತು ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶದ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ನೀಡ ಬೇಕೆಂದು ಮನವಿ ಸಲ್ಲಿಸಿದರು.
ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಯಲ್ಲಿರುವ ಜಯಚಾಮರಾಜೇಂದ್ರ ಸೇತುವೆಯಿಂದ ತುಂಗಾ ನದಿಯ ಉದ್ದಕ್ಕೂ ರಾಮೇಶ್ವರ ದೇವಸ್ಥಾನ ದವರೆಗೆ ಪ್ರವಾಹ ರಕ್ಷಣೆ ಗೋಡೆಯನ್ನು ನಿರ್ಮಿಸಲು ರೂ. 100 ಕೋಟಿ.
ಭದ್ರಾವತಿ ಪಟ್ಟಣದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಮತ್ತು ಪ್ರವಾಹ ಸಂರಕ್ಷಣಾ ಗೋಡೆಗೆ ರೂ. 117.00 ಕೋಟಿ.
ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಜಲ ಸಂರಕ್ಷಣಾ ಕಾರ್ಯಕ್ರಮ ಮತ್ತು ಕೆರೆಗಳ ಹೂಳು ತೆಗೆಯಲು ರೂ. 117.00 ಕೋಟಿ ನೀಡಲು ಮನವಿ ಮಾಡಿದರು.
ಶಿವಮೊಗ್ಗದ ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಶರಾವತಿ ನದಿ ಮತ್ತು ಅದರ ಉಪನದಿಗಳಿಗೆ ಅಡ್ಡಲಾಗಿ ಬ್ಯಾರೇಜ್ ಗಳ ನಿರ್ಮಾಣ ಮತ್ತು ಪಿಕಪ್‌ಗಳ ನಿರ್ಮಾಣಕ್ಕೆ ರೂ. 112.75 ಕೋಟಿ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಂಜೂರಾತಿ ಭರವಸೆ ನೀಡಿದ್ದಾರೆ.