ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳತನ

Kranti Deepa

ಶಿವಮೊಗ್ಗ,ಜ. 10 : ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯ ಬಾವಿಕೇರಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.

ಇಲ್ಲಿನ ನಿವಾಸಿ ಭಾರತಿ ಎಂಬುವವರು ಸ್ವಸಹಾಯ ಸಂಘದ ಸಭೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

ಇವರ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಬೀರುವಿನ ಇದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲಸ್, 6 ಗ್ರಾಂ ತೂಕದ ಚಿನ್ನದ ಕವಿಯೋಲೆ, 200 ರೂ. ನಗದು ಕಳವು ಮಾಡಿದ್ದಾರೆ.

ಈ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";