ಶಿವಮೊಗ್ಗಮೇ .02 : ಒಕ್ಕಲಿಗ ಮತ್ತು ಲಿಂಗಾಯಿತ ಶಾಸಕರು ಸಭೆ ಸೇರಿ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ಜಾತಿಗಣತಿಗೆ ಮುಕ್ತಿಯಿಲ್ಲ ಎಂಬಂತಾಗಿದೆ. ಜಾತಿ ಜನಗಣತಿ ಬಿಡುಗಡೆಯಾಗಬೇಕು. ತಾಕತ್ತಿದ್ದರೆ ಜಾತಿಗಣತಿ ಹೊರಗೆ ತನ್ನಿ ಎಂದು ಎಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಡಿದ ಅವರು, ಡೆಡ್ ಲೈನ್ ನೀಡಿ ಬಿಡುಗಡೆ ಮಾಡಿದರೆ ರಾಜ್ಯ ಸರಕಾರದ ಧೈರ್ಯವನ್ನು ಮೆಚ್ಚಬಹುದಾಗಿದೆ. ಕ್ಯಾಬಿನೆಟ್ ನಲ್ಲಿ ಒಮ್ಮೆ ಅನುಮತಿ ನೀಡಿ. ನಂತರ ತಿದ್ದುಪಡಿ ಮಾಡಲು ಅವಕಾಶವಿದೆ. ರಾಜಕಾರಣ ಮಾಡಬೇಡಿ. ಕೇಂದ್ರದ ಜಾತಿಜನಗಣತಿಯನ್ನು ಸ್ವಾಗತಿಸುವೆ. ರಾಹುಲ್ ಮತ್ತು ಖರ್ಗೆ ಸ್ವಾತಂತ್ರ್ಯ ಬಂದಾಗಿನಿಂದ ಜಾತಿ ಜನಗಣತಿ ತರಲು ಆಗಲಿಲ್ಲ. ಇದನ್ನು ಮೂರು ತಿಂಗಳಲ್ಲಿ ಜಾರಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದರು.
ನಿಮ್ಮ ಶಿಷ್ಯ ಸಿದ್ದರಾಮಯ್ಯ ಜಾತಿಗಣತಿ ಮಾಡಿ ಎಷ್ಟು ವರ್ಷ ಆಯಿತು ಎಂದು ಖರ್ಗೆಯನ್ನು ಪ್ರಶ್ನಿಸಿದ ಅವರು, ನೀವು ಯಾವಾಗ ಜಾರಿಗೆ ತರುವಿರಿ ಹೇಳಿ ಎಂದರು.
ರಾಜ್ಯದಲ್ಲಿ ಮುಸ್ಲೀಂ ಗೂಂಡಾಗಿರಿ ಹೆಚ್ಚಾಗಿದೆ. ಮುಸ್ಲೀಂ ಮೀಸಲಾತಿ ನೀಡಿದ ನಂತರ ಸಿದ್ದರಾಮಯ್ಯನವರ ಸರ್ಕಾರ ನಮ್ಮ ಸರ್ಕಾರ ಎಂದು ತಿಳಿದು ಕೊಲೆಗೆ ಇಳಿದಿದ್ದಾರೆ. ಮಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದನಂತೆ, ಆತ ಇನ್ನ್ಯಾರನ್ನೋ ಕೊಲೆ ಮಾಡಿದನಂತೆ ಹಾಗಾದರೆ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆಯೇ. ಇವರು ಇವರೇ ಕೊಲೆ ಮಾಡಿಕೊಳ್ಳುವುದಾದರೆ ಪೊಲೀಸರು ಯಾಕೆ ಬೇಕು ಎಂದು ಪ್ರಶ್ನಿಸಿದರು.
ಡಿಸಿ ಕಚೇರಿ ಎದುರಿನ ಆಟದ ಮೈದಾನ ಅಥವಾ ಪಾರ್ಕ್ ಗೆ ಮೀಸಲಾದ ಜಾಗ ವಕ್ಫ್ ಜಾಗವಲ್ಲ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಕ್ಫ್ ವಿಷಯ ಸುಪ್ರೀಂನಲ್ಲಿದೆ ಎಂದಿದ್ದಾರೆ. ಹಾಗಿದ್ದರೂ ರಾಜ್ಯ ಸರ್ಕಾರ ಪ್ರತಿಭಟನೆಗೆ ಅವಕಾಶ ನೀಡುತ್ತಿದೆ ಎಂದ ಅವರು, ಈ ಆಸ್ತಿ ಪಾಲಿಕೆ ಆಸ್ತಿಯಾಗಿದೆ. ಸುನ್ನಿ ಜಮಾತೆ ಇಸ್ಲಾಂ ಡಿಸಿ ಕಚೇರಿ ಎದುರಿನ ಜಾಗ ವಕ್ಫ್ ಜಾಗ ಎಂದು ಮನವಿ ನೀಡಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಇವತ್ತು ಬರಬಹುದು. ಕಾನೂನು ಪ್ರಕಾರ ಏನು ಬೇಕಾದರೂ ಮಾಡಿ ಪರವಾಗಿಲ್ಲ. ಕೋರ್ಟ್ ಆದೇಶ ಬಂದರೆ ಪ್ರತಿಭಟನೆ ನಿಲ್ಲಿಸಬೇಕು. ಮೇ ೫ ರಂದು ಸುಪ್ರೀಂ ಕೋರ್ಟ್ ತೀರ್ಮಾನ ಬರಲಿದೆ. ಅಲ್ಲಿಯವರೆಗೆ ಪ್ರತಿಭಟನೆ ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ ಎಂದರು.