ಭದ್ರಾವತಿ, ಡಿ. 19 : ಇಲ್ಲಿನ ಚನ್ನಗಿರಿ ರಸ್ತೆಯಲ್ಲಿರುವ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಫೋಟಗೊಂಡು ಐವರು ಗಂಭೀರ ಗಾಯಗೊಂಡಿದ್ದಾರೆ. ಒಬ್ಬ ನಾಪತ್ತೆಯಾಗಿದ್ದಾನೆ.
ಸ್ಫೋಟದಿಂದ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ. ಕಾರ್ಖಾನೆಯ ಹಲವು ವಸ್ತ್ತಗಳು ದೂರ ಹಾರಿಹೋಗಿ ಬಿದ್ದಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ವೇಳೆ ಒಟ್ಟು 6 ಜನರು ಮಿಲ್‌ನಲ್ಲಿ ಕೆಲಸದಲ್ಲಿದ್ದರು. ಅವಶೇಷಗಳಡಿ ಸಿಲುಕಿರುವ ಇನ್ನೊಬ್ಬನಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸ್ಫೋಟದಿಂದ ಹಾರಿದ ವಸ್ತುಗಳು ಬಡಿದು ಹಲವರು ಗಾಯಗೊಂಡಿದ್ದಾರೆ. ಪಕ್ಕದಲ್ಲಿರುವ ಅಣ್ಣಾನಗರ, ಹೊಸಮನೆ ಭಾಗದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಹೊಸಮನೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ಆರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.