ತಾಳಿ ಕಟ್ಟಿದ ನಂತರ ರಕ್ತದಾನ ಮಾಡಿದ ನವದಂಪತಿ

Kranti Deepa

 ಶಿವಮೊಗ್ಗ,ಫೆ.10 :   ಮದುವೆಗೆಂದು ನೆರೆದಿದ್ದ ಅಪಾರ ಜನ ಸಮುದಾಯದ ನಡುವೆ ತಾಳಿ ಕಟ್ಟುವ ಕಾರ್ಯ ಮುಗಿಯುತ್ತಿದ್ದಂತೆ ನವ ದಂಪತಿಗಳು ಮಂಟಪದಲ್ಲಿಯೇ ಬಹಳ ಖುಷಿಯಿಂದ ರಕ್ತದಾನ ಮಾಡಿ ಜೀವನ ಸಾರ್ಥಕವೆನಿಸಿಕೊಂಡ ಕ್ಷಣ ಇಲ್ಲಿನ ಗುಡ್ಡೇಕಲ್ ಗುಡ್ಡೇಕಲ್ ಸಮುದಾಯ ಭವನದಲ್ಲಿ ಸೋಮವರ ನಡೆಯಿತು.

ಬೊಮ್ಮನಕಟ್ಟೆ ವಾಸಿ ಯಶವಂತ್ ಅವರ ವಿವಾಹವು ತನುಜಾ ಜೊತೆ ಶಿವಮೊಗ್ಗದ ಈ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಭದ್ರಾವತಿ ಟ್ರಾಫಿಕ್ ಹೆಡ್ಕಾನ್ಸ್‌ಟೇಬಲ್ ಹಾಲೇಶಪ್ಪ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ರಕ್ತದಾನದ ಜಾಗೃತಿ ಮೂಡಿಸಿದರು.

ಹುಡುಗ ಮತ್ತು ಹುಡುಗಿ ಮನೆಯವರಿಗೆ ಮದುವೆಯ ದಿನದಂದೇ ರಕ್ತದಾನ ಮಾಡುವ ವಿಶೇಷ ಕಾರ್ಯಕ್ರಮದ ಬಗ್ಗೆ ಹಾಲೇಶಪ್ಪ ತಿಳಿವಳಿಕೆ ನೀಡಿದ್ದರು. ಇದನ್ನು ಎರಡು ಮನೆಯವರು ಸಂತೋಷದಿಂದ ಒಪ್ಪಿಕೊಂಡಿದ್ದರಿಂದ ರಕ್ತ ಕೇಂದ್ರದವರಿಗೆ ಮಾತನಾಡಿ ಕಲ್ಯಾಣ ಮಂಟಪದಲ್ಲೇ ರಕ್ತದಾನ ಶಿಬಿರ ನಡೆಸಿಕೊಟ್ಟರು.

ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗು ಜಾಗೃತಿ ಮೂಡಿಸಲು ಇಂತಹ ವಿಶೇಷ ಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಈ ಜೋಡಿಯನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಮುಂದೆ ಹಲವಾರು ಜೋಡಿಗಳಿಂದ ರಕ್ತದಾನ ಮಾಡಿಸಲು ಅನುಕೂಲವಾಗಲಿದೆ. ಆ ಮೂಲಕ ರಕ್ತದ ಕೊರತೆಯನ್ನು ನೀಗಿಸುವಲ್ಲಿ ನಾವು ಒಂದು ಹೆಜ್ಜೆ ಮುಂದೆ ಬರಲು ಸಾಧ್ಯವಾಗಲಿದೆ ಎಂದು ಹಾಲೇಶಪ್ಪ ಹೇಳಿದ್ದಾರೆ.

Share This Article
";