ಹೊಳೆಹೊನ್ನೂರು, ಅ.14 : ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಯುವಕನೊಬ್ಬ ಮೃತಪಟ್ಟಿದ್ದಾನೆ. ಅರೆಬಿಳಚಿ ಮತ್ತು ಅರೆಬಿಳಚಿ ಕ್ಯಾಂಪ್ ನಡುವೆ ಘಟನೆ ಸಂಭವಿಸಿದೆ. ಭದ್ರಾವತಿ ತಾಲೂಕು ಅರಕೆರೆ ಗ್ರಾಮದ ಅನಿಲ್ ಕುಮಾರ್ (23) ಮೃತ ವ್ಯಕ್ತಿ.
ಆ.11ರ ರಾತ್ರಿ ಅನಿಲ್ ಕುಮಾರ್ ತನ್ನ ಮನೆಯಿಂದ ಯಮಹಾ ಬೈಕ್ ತೆಗೆದುಕೊಂಡು ಹೊರಗೆ ಹೋಗಿದ್ದ. ತಡರಾತ್ರಿಯಾದರು ಆತ ಮನೆಗೆ ಮರಳಿರಲಿಲ್ಲ. ಬೆಳಗ್ಗೆ ಪರಿಚಿತರೊಬ್ಬರು ಅನಿಲ್ ಕುಮಾರ್ ಅವರ ಕುಟುಂಬದವರಿಗೆ ಕರೆ ಮಾಡಿ ಅಪಘಾತದ ಮಾಹಿತಿ ನೀಡಿದ್ದರು.
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಅನಿಲ್ ಕುಮಾರ್ ಮುಖದ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬೈಕ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
|