ತೀರ್ಥಹಳ್ಳಿ,ಅ.15 : ಪಟ್ಟಣದ ಮೇಲಿನ ಕುರುವಳ್ಳಿಯ ಸೋಮೇಶ್ವರ ಗ್ರಾಮದ ತಿರುವಿನಲ್ಲಿ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿ ಮೇಲಿನ ಕುರುವಳ್ಳಿ ವಾಸಿ ಕಾರ್ತಿಕೇಯ(34) ಎಂದು ಗುರುತಿಸಲಾಗಿದ್ದು,ರಸ್ತೆಯ ತಿರುವಿನಲ್ಲಿ ಪಿಕಪ್ ಗೆ ಬೈಕ್ ಡಿಕ್ಕಿ ಹೊಡೆದಾಗ ಬೈಕ್ ಹಿಂಬದಿ ಸವಾರ ಕಾರ್ತಿಕೇಯ ಕೆಳಗೆ ಬಿದ್ದಾಗ ಪಿಕಪ್ ಎದೆಯ ಮೇಲೆ ಹರಿದಿದೆ,ಗಂಭೀರವಾಗಿ ಗಾಯ ಗೊಂಡ ಈತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸ ಲಾಗಿದ್ದು,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.