ಬೆಂಗಳೂರು, ಸೆ.30 : ಮಹೇಶ್ ಶೆಟ್ಟಿ ತಿಮರೋಡಿಯನ್ನು 1 ವರ್ಷ ದಕ್ಷಿಣ ಕನ್ನಡ ಜಿಲ್ಲೆಯಿಂದ, ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ತಡೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ತಿಮರೋಡಿಗೆ ಈಗ ತಾತ್ಕಾಲಿಕ ಜಯ ಸಿಕ್ಕಿದೆ.
ಅಕ್ಟೋಬರ್ 8 ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ. ಪುತ್ತೂರಿನ ಎಸಿ ಸ್ಟೆಲ್ಲಾ ವರ್ಗೀಸ್ ಗಡಿಪಾರು ಆದೇಶ ಹೊರಡಿಸಿದ್ದರು. ಬಳಿಕ ಫೊಕನ್ ಸ್ವಿಚ್ ಆಫ್ ಮಾಡಿ, ತಿಮರೋಡಿ ನಾಪತ್ತೆಯಾಗಿದ್ದರು.
ಇದೀಗ ತಿಮರೋಡಿ ನಿರೀಕ್ಷೆಯಂತೆ, ಅವರ ಪರ ಆದೇಶ ಬಂದಿದೆ. ಹೀಗಾಗಿ ಸದ್ಯಕ್ಕೆ 1 ಸಂಕಷ್ಟದಿಂದ ತಿಮರೋಡಿ ಪಾರಾಗಿದ್ದಾರೆ.ಇನ್ನೊಂದೆಡೆ ಅಕ್ರಮ ಶಸ್ತ್ರಾಸ್ತ್ರ ಮನೆಯಲ್ಲಿ ಹೊಂದಿರುವ ಆರೋಪದಲ್ಲಿ ತಿಮರೋಡಿಗೆ 3 ನೋಟಿಸ್ ಜಾರಿಯಾಗಿದೆ. ಆದರೆ ವಿಚಾರಣೆಗೆ 3 ಬಾರಿಯೂ ಗೈರಾಗಿರುವ ತಿಮರೋಡಿ, ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ.