ಶಿವಮೊಗ್ಗ,ನ. 29 : ಜಿಲ್ಲಾ ಕುರುಬರ ಸಂಘವು ನಿರ್ಮಿಸಲುದ್ದೇಶಿಸಿರುವ ಕನಕದಾಸ ಸಮುದಾಯ ಭವನದ ಭೂಮಿಪೂಜಾ ಕಾರ್ಯಕ್ರಮ ನಾಳೆ ನ. 30ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಪ್ರ. ಕಾರ್ಯದರ್ಶಿ ಆರ್. ಪ್ರಸನ್ನ ಕುಮಾರ್, ಕುರುಬ ಸಮಾಜದಿಂದ ನಿರ್ಮಾಣವಾಗುತ್ತಿರುವ ಪ್ರಪ್ರಥಮ ಸಮುದಾಯ ಭವನ ಇದಾಗಿದೆ. ಬಾಲರಾಜ ಅರಸ್ ರಸ್ತೆಯ ಕುರುಬರ ಹಾಸ್ಟೆಲ್ ಜಾಗದಲ್ಲಿ ಈ ಭವನ ತಲೆಎತ್ತಲಿದೆ. ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು ಮತ್ತು ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಮಹಾಸ್ವಾಮಿಗಳು,ಶಿವಮೊಗ್ಗದ ಕುರುಬರ ಜಡೇದೇವರಮಠದ ಅಮೋಘ ಸಿದ್ಧೇಶ್ವರಾನಂದರು ಸಾನಿಧ್ಯ ವಹಿಸುವರು ಎಂದರು.
ನಗರಾಭಿವೃದ್ಧಿ ಮತ್ತು ಪಟ್ಟಣ ಸಚಿವರು, ಬೈರತಿ ಸುರೇಶ್ ಶಿಲಾನ್ಯಾಸ ನೆರವೇರಿಸುವರು. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅ ತಿಥಿಯಾಗಿರುವರು.
ಅಧ್ಯಕ್ಷತೆಯನ್ನು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ. ಮೈಲಾರಪ್ಪ ವಹಿಸುವರೆಂದರು.
ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಎಂಎಲ್ಸಿಗಳಾದ ಡಿ ಎಸ್ ಅತುಣ್, ಬಲ್ಕಿಶ್ ಬಾನು, ಡಾ!! ಧನಂಜಯ ಸರ್ಜಿ, ಎಂಎಡಿಬಿ ಅಧ್ಯಕ್ಷ ಆರ್ ಎಂ. ಮಂಜುನಾಥ ಗೌಡ, ಸುಡಾ ಅಧ್ಯಕ್ಷ ಸುಂದರೇಶ್, ಡಿಸಿ ಬ್ಯಾಂಕ್ ಉಪಾಧ್ಯಕ್ಷ ಆರ್ ಎಂ ಮಂಜುನಾಥ ಗೌಡ, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಎಂ. ಈರಣ್ಣ ಮೊದಲಾದವರು ಆಗಮಿಸುವರು ಎಂದರು.
ಎಸ್ ಕೆ ಮರಿಯಪ್ಪ ಮಾತನಾಡಿ, ಹಾಸ್ಟೆಲ್ ಇದ್ದ ಜಾಗದಲ್ಲಿ ಸಮುದಾಯ ಭವನ ತಲೆಎತ್ತಲಿದೆ. ಹಾಸ್ಟೆಲನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಾಗುವುದು. ಸಮುದಾಯ ಭವನವನ್ನು ಲಾಭಕ್ಕಾಗಿ ನಿರ್ಮಿಸುತ್ತಿಲ್ಲ. ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ , ಆರ್ಥಿಕ ನೆರವಿಗಾಗಿ ಇದರ ಹಣ ಬಳಕೆ ಮಾಡಲಾಗುವುದು. ಎಲ್ಲ ಸಮುದಾಯದವರಿಗೂ ಕೈಗೆಟುಕುವ ಅಂದರೆ ಅತಿ ಕಡಿಮೆ ದರದಲ್ಲಿ ಸಮುದಾಯ ಭವನ ಸಿಗುವಂತೆ ಮಾಡಲಾಗುವುದು ಎಂದರು.