ಶಿವಮೊಗ್ಗ, ಜು. 16 : ಕ್ಷುಲ್ಲಕ ಕಾರಣಕ್ಕೆ ಸೋಮಿನಕೊಪ್ಪದ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಸ್ನೇಹಿತರ ಮಧ್ಯೆ ಗಲಾಟೆಯಾಗಿ ಒಬ್ಬನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲಾಗಿದೆ. ಗಂಭೀರ ಗಾಯಗೊಂಡಿರುವ ಆತನನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಜಯ್ ಎಂಬಾತನಿಗೆ ಗಾಯವಾಗಿದೆ. ಆತನ ಸ್ನೇಹಿತರಾದ ಮಾರುತಿ ಮತ್ತು ರವಿಕುಮಾರ್ ಎಂಬುವವರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಜಯ್, ಮಾರುತಿ, ರವಿಕುಮಾರ್ ಅವರು ಸ್ನೇಹಿತರೊಂದಿಗೆ ಸೋಮಿನಕೊಪ್ಪದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಲು ತೆರಳಿದ್ದರು. ಈ ಸಂದರ್ಭ ಸ್ನೇಹಿತರ ಮಧ್ಯೆ ಕ್ಷುಲಕ ವಿಚಾರಕ್ಕೆ ಜಗಳವಾಗಿದೆ. ಆಗ ಮಾರತಿಯು ಬಿಯರ್ ಬಾಟಲಿಯಿಂದ ವಿಜಯ್‌ನ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.