ಬಸವೋತ್ಸವ : ಸಾವಿರ ವಚನ ಗಾಯನ ಅನುಕರಣೀಯ

Kranti Deepa
ಶಿವಮೊಗ್ಗ,ಮೇ.09 :ಸಾವಿರದ ವಚನ ಕೇವಲ ಐತಿಹಾಸಿಕ ಮಾತ್ರವಲ್ಲ. ಇದೊಂದು ಪ್ರೇರಣಾದಾಯಿ ಹಾಗೂ ಅನುಕರಣೀಯ ಕಾರ್ಯಕ್ರಮ ಎಂದು ಬೆಳಗಾವಿ ಜೆಎನ್ ಮಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಅವಿನಾಶ್ ಕವಿ ಹೇಳಿದರು.
ಬಸವೋತ್ಸವ 2025 -ಸಾವಿರದ ವಚನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರತಿಯೊಂದು ಪ್ರದೇಶದಕ್ಕೂ ಅದರದ್ದೇ ಆದ ಸಾಂಸ್ಕೃತಿಕ ಅಸ್ಮಿತೆಯಿದೆ. ನಮ್ಮ ನಾಡಿನ ಸಾಂಸ್ಕೃತಿಕ ಅಸ್ಮಿತೆ ಗುರು ಬಸವಣ್ಣ. ರಾಷ್ಟ್ರಕವಿ ಕುವೆಂಪು ಕೂಡಾ ಬಸವೇಶ್ವರರ ಕಾಣಿಕೆಯನ್ನು ಬಣ್ಣಿಸಿದ್ದಾರೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ನಾವು ನೋಡುತ್ತಿರುವ ಧಯನೀಯ ಸ್ಥಿತಿಗೆ ಪರಿಹಾರ ವಿಶ್ವಗುರು ಬಸವಣ್ಣ. ಅವರು ಕೇವಲ ಕನ್ನಡ ನಾಡಿಗೆ ಮಾತ್ರ ಸೀಮಿತರಲ್ಲ. ವಿಶ್ವದ ಸಮಸ್ತ ಕುಲಕೋಟಿಯ ಮಾರ್ಗದರ್ಶಕರು. ಬಸವಣ್ಣ ಹೇಳಿದ್ದನ್ನೇ ರಾಷ್ಟ್ರಪಿತ ಮಹಾತ್ಮಾ ಗಾಂ ಕೂಡಾ ಪ್ರತಿಪಾದಿಸಿದ್ದರು ಎಂದು ವಿವರಿಸಿದರು.
ಇಂದು ನಾವು ಗಂಭೀರವಾದ ಚಿಂತನೆಗೆ ಒಳಗೊಳ್ಳ ಬೇಕು. ಅದಕ್ಕೆ ಈ ಕಾರ್ಯಕ್ರಮ ಕಾರಣೀಭೂತವಾ ಗಿದೆ. ಬಸವಣ್ಣನವರ ವ್ಯಕ್ತಿತ್ವವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಆದರೆ ಅವರು ವಿಶ್ವವನ್ನೇ ಪಸರಿಸಿದ್ದಾರೆ. ಭಾರತೀಯ ಸಮಾಜದ ಸಮಸ್ಯೆಗಳಿಗೆ ಕಾನೂನುಗಳಿಂದ ಪರಿಹಾರ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಜನರ ಮನಸ್ಸಿನಲ್ಲಿ ಬದಲಾವಣೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ಜೀವಿತಾವಯಲ್ಲಿದ್ದ ಸಂದರ್ಭ ದಲ್ಲಿ ರಚಿತವಾದ ಕೃತಿಯಲ್ಲಿ ಅವರ ವಿಶೇಷತೆಗಳನ್ನು ವರ್ಣಿಸಲಾಗಿದೆ. ಬಸವಣ್ಣ ಎಂದು ಅನುವಾದಿತ ಸಾಹಿತ್ಯ ರಚಿಸಿದವರಲ್ಲ. ಅವರು ಅಚ್ಚ ಕನ್ನಡದ ಸಾಹಿತ್ಯ ಕೃಷಿಕರು. ತಮ್ಮ ಆಲೋಚನೆ, ಅನುಭವ, ಅನುಭಾವಗಳಿಂದ 900 ವರ್ಷಗಳ ಬಳಿಕವೂ ಅವರು ಸಿದ್ಧಾಂತವಾಗಿ ನಮ್ಮೊಂದಿಗಿದ್ದಾರೆ ಎಂದರು.
ಬಹುಮುಖ ವ್ಯಕ್ತಿತ್ವದ ವಿಸ್ಮಯ ಗುರು ಬಸವಣ್ಣ. ಅವರದ್ದು ಪ್ರಬುದ್ಧ ಮಾನಸಿಕತೆಯಾಗಿತ್ತು. ಮಾನವ ಸಹಜವಾಗಿ ಅನೇಕ ದೌರ್ಬಲ್ಯಗಳಿರುತ್ತವೆ. ಆದರೆ ಬಸವಣ್ಣ ಅದನ್ನು ಮೀರಿ
ನಿಂತವರು. ಜನ ಸಾಮಾನ್ಯರಲ್ಲಿ ಆತ್ಮಸ್ಥೈರ್ಯ ಬಿತ್ತಿದವರು.ಪ್ರಶ್ನಿಸುವ ಸ್ವಭಾವವನ್ನು ಕಲಿಸಿದವರು. ವೈಜ್ಞಾನಿಕ ಪ್ರಜ್ಞೆ ಬೆಳೆಸಿದವರು ಎಂದು ಬಣ್ಣಿಸಿದರು.
ಬಸವಣ್ಣ ಭಕ್ತಿಯ ಬಂಡಾರಿ ಎನಿಸಿಕೊಂಡವರು. ಅವರೊಬ್ಬ ಸಮಷ್ಟಿ ಚಿಂತಕ. ಜಾತಿಗಳು ಮಾನವ ನಿರ್ಮಿತ ಎಂಬುದನ್ನು ಪ್ರತಿಪಾದಿಸಿ ಕಾಯಕ ಸಂಸ್ಕೃತಿಯ ಹಿರಿಮೆಯನ್ನು ಸಾರಿದರು. ಕಾಯಕಕ್ಕೆ ವಿಶೇಷ ಗೌರವ ಕಲ್ಪಿಸಿದವರು. ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದರು. ಪ್ರಜಾಪ್ರಭುತ್ವದ ತಂದೆ ಅವರು ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಧನಂಜಯ ಸರ್ಜಿ, ಸಾವಿರದ ವಚನಗಳು ಕಾರ್ಯಕ್ರಮ ಐತಿಹಾಸಿಕವಾದುದು. ಇದುವರೆಗೆ ವಿಶ್ವದ ಎಲ್ಲಿಯೂ ಇಂತಹ ಪ್ರಯತ್ನ ನಡೆದಿಲ್ಲ. ಈ ಹಿಂದೆ ಸಂಗೀತಗಾರ ಸಿ.ಅಶ್ವತ್ ಇಂತಹದೊಂದು ಪ್ರಯತ್ನ ನಡೆದಿತ್ತಾದರೂ ಸಂಪೂರ್ಣವಾಗಿ ವಚನ ಗಾಯನಕ್ಕೆ ಅದು ಸೀಮಿತವಾಗಿರಲಿಲ್ಲ. ವಚನ ಎಂಬುದು ಭಕ್ತಿ, ಧ್ಯಾನದ ಸಂಗಮ. ವಚನ ಗಾಯನದಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

Share This Article
";