ಶಿವಮೊಗ್ಗ,ಆ.25 : ನಾಡಹಬ್ಬ ಮೈಸೂರು ದಸರೆ ಉದ್ಘಾಟನೆಗೆ ಭಾನು ಮುಸ್ತಾಕ್ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರು ಮೊದಲು ಚಾಮುಂಡಿ ಪೂಜೆ ನೆರವೇರಿಸಿ ಬಳಿಕ ದಸರಾ ಉದ್ಘಾಟಿಸಲಿ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.ಸುದ್ದಿ ಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಾನು ದಸರಾ ಉದ್ಘಾಟಿಸುವ ಬಗ್ಗೆ ಈ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಬಹಳಷ್ಟು ಜನರು ದಸರಾವನ್ನು ಉದ್ಘಾಟಿಸಿದ್ದಾರೆ.
ಯಾರು ಉದ್ಘಾಟಿಸುತ್ತಾರೆಂಬುದು ಮುಖ್ಯವಲ್ಲ. ಚಾಮುಂಡಿ ಪೂಜೆ ಮಾಡುವುದು.ಮುಖ್ಯ ಎಂದರು. ಬಾನು ಮುಸ್ತಾಕ್ ಎದ್ದಿರುವ ವಿವಾದಕ್ಕೆಮೊದಲು ಸ್ಪಷ್ಟಪಡಿಸಬೇಕು. ಬಳಿಕ ಅವರು ದಸರೆ ಉದ್ಘಾಟಿಸಲಿ. ನನ್ನದೇನೂ ತಕರಾರಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಹೆಚ್ಚೆಂದು ಗುತ್ತಿದಾರರ ಸಂಘದ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಹಳೆ ಸರ್ಕಾರಕ್ಕಿಂತ ಹೆಚ್ಚಿನ ಕಮಿಷನ್ ನೀಡಬೇಕು ಎಂದು ಸಹ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಈ ಬಗ್ಗೆ ಉತ್ತರಿಸಿಲ್ಲ. ನಾನು ಸಿಎಂ ಅವರಿಗೆ ಕೇಳುತ್ತೇನೆ ತಕ್ಷಣ ಇದಕ್ಕೆ ಉತ್ತರಿಸಬೇಕು ಎಂದರು.ಗುತ್ತಿಗೆದಾರ ಸಂಘದವರು ಸಿಯಳ್ಳು ಹೇಳಿದ್ದರೆ ಅವರನ್ನು ಅರೆಸ್ಟ್ ಮಾಡಬೇಕು.
ಇಲ್ಲವೇವ ಭ್ರಷ್ಟಾಚಾರ ನಡೆದಿದೆ ಅಂತ ಒಪ್ಪಿಕೊಳ್ಳಬೇಕು.
ರಾಜ್ಯದಲ್ಲಿ ಗುತ್ತಿಗೆದಾರರು ಮಾಡಿರುವ ಸತ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು.ತಕ್ಷಣ ಗುತ್ತಿಗೆದಾರರ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.