ಶಿವಮೊಗ್ಗ ,ಮಾ.28 : ಇಡಿ ನೀಡಿದ ಸಮನ್ಸ್ ಪ್ರಶ್ನಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ .ಮಂಜುನಾಥ ಗೌಡ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ಎಸ್. ರಾಚಯ್ಯರವರನ್ನ ಒಳಗೊಂಡು ಪೀಠ ಈ ಆದೇಶ ಹೊರಡಿಸಿದೆ.
2014 ರಲ್ಲಿ ಶಿವಮೊಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದಿರುವ ನಕಲಿ ಅಡಮಾನ ಬಂಗಾರ ಸಾಲ ಅವ್ಯವಹಾರ ಸಂಬಂಧ ಪ್ರಕರಣ ದಾಖಲಾ ಗಿತ್ತು. ಆ ಸಂದರ್ಭದಲ್ಲಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಒತ್ತಾಯ ಕೂಡ ಪ್ರಭಾಲವಾಗಿ ಕೇಳಿ ಬಂದಿತ್ತು.
ಪ್ರಕರಣದಿಂದಾಗಿ ಮಂಜುನಾಥ್ ಗೌಡರನ್ನ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೆಲವು ತಿಂಗಳು ನಂತರ ಮಂಜುನಾಥ್ ಗೌಡರು ಜಾಮೀನಿನ ಮೇಲೆ ಹೊರಬಂದರು. ಈ ಪ್ರಕರಣಕ್ಕೆ ಸಂಬಂಧಿಸದಂತೆ 2021 ರಲ್ಲಿ ಆರೋಪ ಪಟ್ಟಿಯನ್ನ ಸಲ್ಲಿಸಲಾಗಿತ್ತು. ತನಿಖೆ ನಡೆಸಿದ ಇಡಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆಧ್ಯಕ್ಷರಾಗಿದ್ದ ಮಂಜು ನಾಥ್ ಗೌಡರ ಅವಧಿಯಲ್ಲಿ 63 ಕೋಟಿ ರೂ.ಹಗರಣ ನಡೆದಿದ್ದು ಈ ಸಂಬಂಧ ಇಡಿ ಸಮನ್ಸ್ ಅನ್ನು ಗೌಡರಿಗೆ ಜಾರಿ ಮಾಡಿತ್ತು.
ತಮ್ಮ ವಿರುದ್ಧದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹೊರಡಿಸಿದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದಿನ ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ನಂತರ ಮಂಜುನಾಥ್ ಗೌಡರು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ಎಸ್. ರಾಚಯ್ಯರವರನ್ನ ಪೀಠ ವಜಾಗೊಳಿಸಲಾಗಿದೆ.