ಮರಣದಂಡನೆಗೆ ಒಳಗಾದ ಬಿ. ಇಎಡಿ ರ್‍ಯಾಂಕ್ ವಿಜೇತೆ, ರಂಗನಟಿ ‘ವಸಂತಸೇನೆ’

Kranti Deepa
ಶಿವಮೊಗ್ಗ,ಅ.25  : ಪತಿ, ಶಿಕ್ಷಕ ಇಮ್ಮಿಯಾಜ್ ಅಹಮದ್ ಕೊಲೆ ಪ್ರಕರಣದಲ್ಲಿ ಶನಿವಾರ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕಿ ಎಸ್.ಲಕ್ಷ್ಮಿ, ಜಿಲ್ಲೆಯಲ್ಲಿ ರಂಗ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.ಕೂಚಿಪುಡಿ ಭರತನಾಟ್ಯ, ನೃತ್ಯ ಕಲಾವಿದೆಯಾಗಿರುವ ಇವರು, ಮೃಚ್ಛಕಟಿಕ ವಸಂತಸೇನೆಯ ಪಾತ್ರದ ಮ‌ೂಲಕ ಹೆಸರು ಮಾಡಿದ್ದರು.
‘ಮಾತೆ ಮಂಡೋದರಿ’, ಚಿಮ್ಮವುಗೆ’,”ಉಡುತಡಿ’ ನಾಟಕಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದ ಲಕ್ಷ್ಮಿ, ಈಚೆಗೆ ಶಿವಮೊಗ್ಗದಲ್ಲಿ ನಡೆದಿದ್ದ ‘ಮೃಚ್ಛಕಟಿಕಂ’ ನಾಟಕದಲ್ಲಿ ವಸಂತ ಸೇನೆ ಪಾತ್ರದಲ್ಲಿ ಅಭಿನಯಿಸಿ ದ್ದರು.2024ರಲ್ಲಿ ಬೆಂಗಳೂರಿನ ಸಂಸ್ಥೆಯೊಂದರಿಂದ ಆಯೋಜಿಸಿದ್ದ ‘ಸೌಥ್ ಏಷ್ಯನ್ ವಿಮೆನ್ ಅಚೀವರ್ಸ್ ಅವಾರ್ಡ್‌’ನ ಅಂತಿಮ ಸುತ್ತಿಗೆ ಪ್ರವೇ ಶಿಸಿದ್ದರು. ಹವ್ಯಾಸಿ ರಂಗ ಕಲಾವಿದೆ ಆಗಿ ಶಿವಮೊಗ್ಗದ ಬೇರೆ-ಬೇರೆ ಕಲಾ ತಂಡಗಳ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರಸಾದನ ಕಲಾವಿದೆಯಾಗಿಯೂ ಕೆಲಸ ಮಾಡಿದ್ದಾರೆ.
ಭದ್ರಾವತಿಯ ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮಿಗೆ ಬಾಲ್ಯದ ಸ್ನೇಹಿತ ವೃತ್ತಿಯಲ್ಲಿ ಚಾಲಕನಾಗಿದ್ದ ಕೃಷ್ಣಮೂರ್ತಿ ಜತೆ ಆತ್ಮೀಯತೆ ಬೆಳೆದಿತ್ತು. ಅದಕ್ಕೆ `ಆಕ್ಷೇಪಿಸಿದ್ದ ಪತಿ ಇಮ್ಮಿಯಾಜ್ ಅವರನ್ನು ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಆತನ ಸಂಬಂಧಿ ಶಿವರಾಜ 2016ರ ಜುಲೈ 7ರಂದು ಕೊಲೆ ಮಾಡಿ ಮೃತದೇಹವನ್ನು ಭದ್ರಾನದಿಗೆ ಎಸೆದಿದ್ದರು.
 2011ರಲ್ಲಿ ಕಲಬುರಗಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದ. ಸೊರಬ ಸೊರಬ ತಾಲ್ಲೂಕಿನ ಆನವಟ್ಟಿಯ  ಶಿಕ್ಷಕ ಇಮ್ಮಿಯಾಜ್ ಅಹಮದ್‌ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ದಂಪತಿ ವಾಪಸ್ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಪಡೆದಿದ್ದರು. ದಂಪತಿಗೆ ಪುತ್ರ ಇದ್ದಾನೆ.
ಇಮ್ಮಿಯಾಜ್ ಸಹೋದರ ಎಜಾಜ್ ಅಹಮದ್‌ ದಾಖಲಿಸಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಭದ್ರಾವತಿಯ ನ್ಯೂಟೌನ್ ಪೊಲೀಸರು, ಮೂವರನ್ನು ಬಂಧಿಸಿ ವಿಚಾರಣೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಜಾಮೀನು ಹೈಕೋರ್ಟ್‌ನಿಂದ ಪಡೆದಿದ್ದ ಲಕ್ಷ್ಮಿ, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಉರ್ದು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇದೇ ಫೆಬ್ರುವರಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸಿದ ಬಿ.ಇಡಿ ಪರೀಕ್ಷೆಯಲ್ಲಿ ಮೂರನೇ ರಾಂಕ್ ಪಡೆದಿದ್ದಾರೆ.

Share This Article
";