ಶಿವಮೊಗ್ಗ,ಜ.22 : ಸಂಗೀತ ನೃತ್ಯ ಮುಂತಾದ ಕಲೆಗಳು ಉಳಿಯಬೇಕು. ಇಂತಹ ಕಾರ್ಯಕ್ರಮಗಳು ಆಸಕ್ತರಿಗೆ ವೇದಿಕೆಯಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸಲಹೆ ನೀಡಿದರು.
ಅವರು ಇಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಕಲೆಗೆ ಸೆಳೆಯುವ ಶಕ್ತಿ ಯಿದೆ. ಇದು ವ್ಯಕ್ತಿತ್ವವನ್ನು ಅನಾವರಣ ಗೊಳಿಸುತ್ತದೆ.
ಸಂತೋಷ ಸಾಮರಸ್ಯಗಳನ್ನು ಬೆಳೆಸುತ್ತದೆ. ಮತ್ತು ಸಂಸ್ಕಾರ ನೀಡುತ್ತದೆ. ಮಾನವೀಯ ಪ್ರಜ್ಞೆ ಬೆಳೆಸುತ್ತದೆ. ವಿಶ್ವ ಕುಟುಂಬ ಪ್ರೇಮವನ್ನು ಸೃಷ್ಟಿಸುತ್ತದೆ. ಮನುಷ್ಯ ಒಂದೇ ಜಾತಿ ಎಂಬ ನೀತಿಯನ್ನು ಬೋಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಯವರು ಕೇವಲ ಜಿಲ್ಲಾ ಸ್ಥಳಗಳಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಆಯೋಜನೆ ಮಾಡದೆ ತಾಲ್ಲೂಕು ಹೋಬಳಿಗಳ ಮಟ್ಟ ದಲ್ಲೂ ನಡೆಸಬೇಕು. ಅಕಾಡೆಮಿ ಸಮು ದಾಯದತ್ತ ತಲುಪಬೇಕು ಸಂಗೀತ, ನೃತ್ಯ, ರಂಗಭೂಮಿ ಮುಂತಾದ ಕಲೆಗಳು ಮನು ಷ್ಯತ್ವವನ್ನು ಬೆಳೆಸುತ್ತವೆ ಎಂದು ಹೇಳಿದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ ಮಾತನಾಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್., ಅಕಾಡೆಮಿಯ ರಿಜಿಸ್ಟರ್ ಎನ್. ನರೇಂದ್ರ ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್, ಅಕಾಡೆಮಿ ಸದಸ್ಯರುಗಳಾದ ಡಾ.ಬಿ.ವಿ. ಗೀತಾ, ಸವಿತಾ ಅಮರೇಶ್ ನುಗಡೋಣಿ, ಉಷಾ ಬಸಪ್ಪ, ನಿರ್ಮಲ ಡಿ.ಆರ್. ಮುಂತಾದವರು ಉಪಸ್ಥಿತರಿದ್ದರು.
ಸದಸ್ಯ ದೇವರಾಜು ಡಿ., ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಲಕ್ಷ್ಮಿ ನಿರೂಪಿಸಿ ದರು. ನಂತರ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.