ಶಿವಮೊಗ್ಗ ಸಿಂಹಧಾಮಕ್ಕೆ ಬಿಳಿ ಹುಲಿ ಆಗಮನ

Kranti Deepa

ಶಿವಮೊಗ್ಗ,ಅ.04 : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಸದಸ್ಯರ ಆಗಮನವಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದಾಗಿನಿಂದ ಕ್ವಾರಂಟೈನ್‌ನಲ್ಲಿದ್ದ ಪ್ರಾಣಿಗಳು ಈಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಧಿಕಾರಿಗಳು ಫೋಟೊ ರಿಲೀಸ್ ಮಾಡಿದ್ದಾರೆ.

ಇದೇ ಮೊದಲ ಬಾರಿ ಶಿವಮೊಗ್ಗದ ಮೃಗಾಲಯಕ್ಕೆ ಬಿಳಿ ಹುಲಿ ಆಗಮನವಾಗಿದೆ. ಇದೇ ಮೊದಲ ಬಾರಿ ಹೊರ ರಾಜ್ಯದಿಂದ ಹುಲಿ, ಸಿಂಹಗಳನ್ನು ತರಿಸಲಾಗಿದೆ.ಬಿಳಿ ಹುಲಿ ಶಿವಮೊಗ್ಗ ಮೃಗಾಲಯಕ್ಕೆ ಇದೆ ಮೊದಲ ಬಾರಿ ಬಿಳಿ ಹುಲಿ ಆಗಮನವಾಗಿದೆ. ಔರಂಗಾಬಾದ್ ಮೃಗಾಲಯದಿಂದ 2 ವರ್ಷದ ವಿಕ್ರಂ ಹುಲಿ ತರಿಸಲಾಗಿದೆ.

  • ಮೂರು ಬಂಗಾಳ ಹುಲಿಗಳು
    ತ್ಯಾವರೆಕೊಪ್ಪ ಸಫಾರಿಗೆ ಮೂರು ಬಂಗಾಳ ಹುಲಿಗಳು ಆಗಮಿಸಿವೆ. ಔರಂಗಾಬಾದ್ ಸಫಾರಿಯಿಂದ ಎರಡು ಹೆಣ್ಣು ಹುಲಿಗಳು 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ, ಇಂದೋರ್ ಮೃಗಾಲಯದಿಂದ 3 ವರ್ಷ ಭದ್ರಾ ಆಗಮಿಸಿದೆ.
  • ಎರಡು ಸಿಂಹಗಳು
    ಇಂದೋರ್ ಮೃಗಾಲಯದಿಂದ ಎರಡು ಸಿಂಹಗಳು ಆಗಮಿಸಿವೆ. 2 ವರ್ಷದ ಸಿಂಹ ಶಿವ, 2 ವರ್ಷದ ಸಿಂಹಿಣಿ ಸಾರಾ ಆಗಮಿಸಿವೆ.

Share This Article
";