ಶಿವಮೊಗ್ಗ, ಫೆ.19 : ಹೋಟೆಲ್‌ನಲ್ಲಿ ಪರಿಚಯಸ್ಥ ಹುಡುಗಿಯೊಂದಿಗೆ ಊಟ ಮಾಡುವ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಯುವಕರ ತಂಡ ವಿಡಿಯೋ ಮಾಡಿ ಅವರನ್ನು ಅಪಹರಿಸಿ , ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣವವನ್ನು ತುಂಗಾನಗರ ಪೊಲೀಸರು ಬೇಧಿಸಿ ಮೂವರನ್ನು ಬಂಧಿಸಿದ್ದಾರೆ. ಕ್ಲಾರ್ಕ್‌ಪೇಟೆಯ ಇಲಿಯಾಜ್ ಯಾನೆ ಇಲ್ಲು, ಚೀಲೂರಿನ ಮೊಹಮದ್ ವಾಸಿಮ್, ಅಣ್ಣಾನಗರದ ಚಂದ್ರಶೇಖರ್ ಬಂಧಿತರು.
ಭದ್ರಾವತಿಯ ದಡಮಘಟಟ್ದ ಯುವಕ ಶಹಿದ್ ಫಜಲ್ ಶಿವಮೊಗ್ಗದ ಗಾಜನೂರಿಗೆ ಪರಿಚಯಸ್ಥ ಯುವತಿಯೊಂದಿಗೆ ಅಮ್ಮ ಹೋಟೆಲ್‌ಗೆ ಬಂದು ಊಟಕ್ಕೆ ಕುಳತಿದ್ದನು. ಈ ಯುವಕ ಬಿಯರ್ ಬಾಟಲನ್ನು ಹಿಡಿದುಕೊಂಡಿದ್ದನು. ದಿನ್ನು ಚಿತ್ರೀಕರಿಸಿಕೊಂಡಿದ್ದ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಈ ಯುವಕರು ವಿಡಿಯೋ ಮಾಡಿಕೊಡಿದ್ದರು. ನಂತರ ಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದರು.
ಬಳಿಕ ಈ ಯುವಕ ಯುವತಿಯನ್ನು ಆಟೋವೊಂದರಲ್ಲಿ ಹತ್ತಿಸಿಕೊಂಡು ತೀರ್ಥಹಳ್ಳಿ ರಸ್ತೆಯಲ್ಲೇ ಸಾಗಿ ಬಂದು ಬೈಪಾಸ್ ಬಳಿ ಒಳಗೆ ಕರೆದುಕೊಂಡು ಹೋಗಿ 1.50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಯುವತಿಯ ಪರ್ಸ್‌ನ್ನು ಕಿತ್ತುಕೊಂಡು ಅದರಲ್ಲಿದ್ದ 24,500 ರೂ.ಗಳನ್ನು ಎತ್ತಿಕೊಂಡಿದ್ದರು. ನಂತರ ಶಹಿದ್‌ನಿಂದ 1500 ರೂ. ಹಣ ಕಿತ್ತುಕೊಂಡು ಇಬ್ಬರ ಮೊಬೈಲ್ ನಂಬರ್ ಪಡೆದಿದ್ದರು.
ನಂತರ ಫಜಲ್‌ಗೆ ಇಲಿಯಾಜ್ 1.50 ಲಕ್ಷ ಹಣ ತರಲಿಲ್ಲ ಎಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.. ಸಾಲ ಮಾಡಿ, 6 ಸಾವಿರ ರೂ. ಹಣ ಪಡೆದು ಶಿವಮೊಗ್ಗದಲ್ಲಿ ಪರಿಚಯಸ್ಥನಿದ್ದ ಜಾಫರ್ ನೊಂದಿಗೆ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಬಂದು ಕಿಡ್ನ್ಯಾಪ್ ಮಾಡಿದ್ದ ಆಟೋದಲ್ಲಿ ಕುಳಿತಿದ್ದ ಇಲಿಯಾಜ್‌ಗೆ ನನ್ನ ಬಳಿ 6 ಸಾವಿರ ರೂ. ಹಣ ಬಿಟ್ಟರೆ ಬೇರೆ ಏನೂ ಇಲ್ಲ. ತೆಗೆದುಕೊಂಡು ಬಿಟ್ಟುಬಿಡಿ ಎಂದಿದ್ದಾನೆ.
ಇಷ್ಟಕ್ಕೆ ಕೆಂಡಮಂಡಲನಾದ ಇಲಿಯಾಜ್ ಯುವಕನನ್ನು ಎಳೆದಾಡಿದ್ದನು. 1.50 ಲಕ್ಷ ರೂ. ನೀಡದಿದ್ದರೆ ಜೀವ ಸಹಿತ ಬಿಡಲ್ಲ ಎಂದು ೬ ಸಾವಿರ ರೂ.ವನ್ನು ಕಿತ್ತುಕೊಂಡು ಕಳುಹಿಸಿದ್ದನು.ಈ ವೇಳೆ ಫಜಲ್ ಕಣ್ಣಿಗೆ ಗಾಯವಾಗಿದೆ. ಪ್ರಕರಣದ ಬೆನ್ನುಬಿದ್ದ ತುಂಗಾನಗರ ಪಿಐ ಗುರುರಾಜ್ ಮತ್ತು ಸಿಬ್ಬಂದಿಗಳು ಮಂಗಳವಾರ ಆರೋಪಿ ಇಲ್ಲು ಗ್ಯಾಂಗ್‌ನ್ನು ಬಂಧಿಸಿದ್ದಾರೆ.