ಶಿವಮೊಗ್ಗ,ಜ.16 : ಮದ್ಯ ಸೇವನೆ ವೇಳೆ ಪ್ರಸ್ತಾಪವಾದ ವಿಷಯದಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ಜ.13 ರಂದು ಈ ಬಗ್ಗೆ ಕಿರಣ್ ಎಂಬುವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಆನಂದ್, ನಿತಿನ್, ಮೋಹನ್, ಮಾಲತೇಶ,, ರಾಕೇಶ್ ಅಡ್ಡು ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕಿರಣ್ ಎಂಬುವರ ಸ್ನೇಹಿತನಾದ ಸದಾನಂದ ಇವರಿಗೆ ಆನಂದ ಬಿನ್ ಜಯರಾಮ, ನಿತಿನ್ ಬಿನ್ ನಾಗರಾಜ, ಮೋಹನ ಬಿನ್ ಜಯರಾಮ, ಮಾಲತೇಶ ಬಿನ್ ರಾಜು, ರಾಕೇಶ್, ಆಡು ಮತ್ತು ಇತರರು ಜ.12 ರಂದು ರಾತ್ರಿ 10.15 ರ ಸಮಯದಲ್ಲಿ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ದೂರು ದಾಖಲಾಗಿದ್ದು ಘಟನೆ ಸಾಗರ ರಸ್ತೆಯ ಬಾರ್ ಬಳಿ ನಡೆದ ಘಟನೆಯಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
6 ಜನರ ಜೊತೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ವೇಳೆ ಕಿರಣ್‌ಗೆ ಹೊಡೆದು ಯಾರನ್ನು ಕರೆಸುತ್ತೀಯಾ, ಕರೆಯಿಸು ಎಂದು ಬೆದರಿಕೆ ಹಾಕಿದ್ದಾರೆ. ಆಗ ಕಿರಣ್ ತನ್ನ ಸ್ನೇಹಿತ ಸದಾನಂದ ಬಿನ್ ನಾಗರಾಜನನ್ನು ಗಾಡಿಕೊಪ್ಪ ಬಾರ್ ಪಕ್ಕ ಬರಲು ತಿಳಿಸಿದ್ದನು. ಸದಾನಂದ ಬಂದ ನಂತರ ಪುನಃ ಜಗಳ ಪ್ರಾರಂಭವಾಗಿ 6 ಜನರ ಪೈಕಿ ಮೂವರು ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಸದಾನಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.