ಭದ್ರಾವತಿ,ಡಿ.18 : ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮದ ಅನಿತಾ ಗೃಹಲಕ್ಷ್ಮಿ ಹಣವನ್ನು ಖರ್ಚು ಮಾಡಿದರೆ ಖಾಲಿ ಆಗುತ್ತದೆ ಎಂದು 9 ತಿಂಗಳ ಹಣ ಅಂದರೆ ರೂ.18 ಸಾವಿರ ಹಣವನ್ನು ಕೂಡಿಟ್ಟು, ಹಸುವನ್ನು ಖರೀದಿ ಮಾಡಿ ಹೈನುಗಾರಿಕೆ ನಡೆಸುತ್ತಿದ್ದಾರೆ ಹಾಗೂ ಪ್ರತಿ ತಿಂಗಳು ಜಮೆಯಾಗುವ ಗೃಹಲಕ್ಷ್ಮಿ ಹಣದೊಂದಿಗೆ ಮತ್ತುಷ್ಟು ಸೇರಿಸಿ ಕಿಡ್ನಿ ಸಮಸ್ಯೆ ಇದ್ದ ಪತಿಗೆ ಆಪರೇಷನ್ ಮಾಡಿಸಿದ್ದಾರೆ.
ಈ ಬಗ್ಗೆ ಅವರು ಮಾತನಾಡಿ, ಆಪರೇಷನ್ ವೆಚ್ಚವನ್ನು ಹಸುವಿನ ಹಾಲು ಮಾರಿ ಭರಿಸುತ್ತಿದ್ದೇನೆ. ಇಂಥ ಯೋಜನೆ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ ಅವರಿಗೆ ಮತ್ತಷ್ಟು ಜಯ ಸಿಗಲಿ.
ಬಡವರಿಗೆ ಇನ್ನಷ್ಟು ಯೋಜನೆಗಳನ್ನು ನೀಡಲಿ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡವರು ಮಾಡಲಿ ಆದರೆ, ನಮ್ಮಂಥ ಬಡವರಿಗೆ ಅನುಕೂಲ ಆಗಿದೆ ಗ್ಯಾರಂಟಿಗಳನ್ನು ಇದೇ ರೀತಿ ಮುಂದುವರಿಸಲಿ ಎಂದು ಮನವಿ ಮಾಡಿದ್ದಾರೆ.