ಸಾಹಿತ್ಯ ಕ್ಷೇತ್ರದಲ್ಲಿ ಬದಲಾವಣೆಗೆ ಮುಂದಾಗಿ

Kranti Deepa

ಶಿವಮೊಗ್ಗ,ನ.22 : ಕವಯಿತ್ರಿಯರು ಸಾಹಿತ್ಯದ ಬೆಳವಣಿಗೆ,  ಸಾಹಿತ್ಯ ಕೃತಿಯ ಹೆಚ್ಚಳ, ಲಿಂಗ ಅಸಮಾನತೆ, ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಬದಲಾವಣೆಗೆ ಮುಂದಾಗಬೇಕೆಂದು ಸಂಸದ ಬಿ ವೈ ರಾಘವೇಂದ್ರ ಕರೆ ನೀಡಿದರು.

ಅವರು ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆರಂsವಾದ ಮೂರು ದಿನಗಳ ಅಖಿಲ ಭಾರತಿಯ ಕವಯಿತ್ರಿಯರ ಸಮ್ಮೇಳನದಲ್ಲಿ ಮಾತನಾಡಿದರು.

12 ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಅಕ್ಕಮಹಾದೇವಿ ಇದೇ ನೆಲದಲ್ಲಿ ಸಾಹಿತ್ಯಕ ಚಳವಳಿಗೆ ನಾಂದಿ ಹಾಡಿದ್ದಾರೆ. ಇಂದು ಇದೇ ಸ್ಥಳದಲ್ಲಿ ಅಖಿಲ ಭಾರತ ಮಟ್ಟದ ಕವಯಿತ್ರಿಯರ ಸಮ್ಮೇಳನ ನಡೆಯುತ್ತಿದೆ.  ಯು ಆರ್ ಅನಂತಮೂರ್ತಿ, ಜಿ ಎಸ್ ಶಿವರುದ್ರಪ್ಪ ಮೊದಲಾದ ಬರಹ ಗಾರರು ಸ್ತ್ರೀ ಕುಲದ ಬಗ್ಗೆ ಕಾಳಜಿಯುತವಾಗಿ ಬರೆದು ಪುರುಷ ಪ್ರತಿನೀಕರಣದ ಸಮಾಜವನ್ನು ಪ್ರಶ್ನಿಸಿದ್ದಾರೆ.

ಈಗ ಬದಲಾವಣೆಯ ಕಾಲವಾಗಿರುವುದರಿಂದ  ಸಮಾಜದಲ್ಲಿ ಮಹಿಳೆ- ಪುರುಷ ಎಂಬ ತಾರತಮ್ಯದ ಮನೋಭವದಲ್ಲೂ ಬದಲಾವಣೆ ಆಗಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡಿ,  ಹೆಣ್ಣು ಹುಟ್ಟಿದ ಮನೆಗೆ ತಣ್ಣಗೆ ಇರುತ್ತದೆ. ಸೌಟು ಹಿಡಿಯುವ ಕೈಗಳು, ಲೇಖನಿಯನ್ನು ಹಿಡಿಯುತ್ತವೆ.

ಆ ಮೂಲಕ ಸಮಾಜದಲ್ಲಿ ಬದಲಾವಣೆಗೆ ನಾಂದಿ ಹಾಡುತ್ತವೆ. ಲೇಖನಿಯಿಂದ ಈ ದೇಶದ ಸಂಸ್ಕೃ ತಿಯೇ ಬದಲಾವಣೆಯಾಗಲಿದೆ. ೧ ಸಾವಿರ ಪುರುಷ ಲೇಖ ಕರಿಗೆ ಒಬ್ಬ ಮಹಿಳಾ ಲೇಖಕಿ ಸಮವಾಗಿದ್ದಾಳೆ  ಸುಸಂಸ್ಕೃತ ದೇಶ ಕಟ್ಟಲು ಮಹಿಳೆ ಮುಂದಾಗಿದ್ದಾಳೆ. ಹೆಣ್ಣು ಮನೆ ಬೆಳಗುವ ದೀಪ. ವಿಶ್ವದಲ್ಲಿ ಭಾರತದಲ್ಲಿಯೇ ಹೆಣ್ಣಿಗೆ ಮ ತ್ವದ ಸ್ಥಾನವಿದೆ. ಅವಳು ಸಂಸ್ಕೃತಿಯ ಪ್ರತೀಕ ಎಂದರು.

ಕವಯಿತ್ರಿಯರ ಸಂಘದ ರಾಷ್ಟಾಧ್ಯಕ್ಷ್ಷೆ ಮನೋಮತಿ ಕುರ್ಮಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ,  ಸಮ್ಮೇಳನ ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರ ಹಕ್ಕುಗಳು ಮರುಸ್ಥಾಪನೆಯಾಗಬೇಕು ಎಂಬ ಹಂಬಲ ಹೊಂದಿದೆ. ಇದೇ ಉದ್ದೇಶದಿಂದ ಈ ಸಂಘಟನೆ ಹುಟ್ಟುಹಾಕಲಾಗಿದೆ. ಪುರುಷರು ಮಹಿಳಾ ಸಂಘಗಳನ್ನು ಕಟ್ಟುವ ಸಂದರ್ಭ ತುಂಬ ವಿರಳವಾಗಿದ್ದ ಡಾ.ಲಾರಿ ಆಜಾದ್ ಸಂದರ್ಭದಲ್ಲಿ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು.

ಕವಯಿತ್ರಿಯರ ಉದ್ದೇಶ ಕೇವಲ ಸಾಹಿತ್ಯವನ್ನು ಸೃಷ್ಟಿಮಾ ಡುವುದು ಮಾತ್ರವಲ್ಲ, ಅಕಾರವು ಬೇಕಾಗಿದೆ. ಇದೊಂದು ದೊಡ್ಡ ಸವಾಲು ಹೌದು, ಬಂದೂಕಿನಿಂದ ಬೆಳಕು ಬರುವು ದಿಲ್ಲ, ಅದು ಹಕ್ಕಿಯ ಹಾಡಿನಿಂದ ಅರಳಲು ಸಾಧ್ಯ ಇದೆ. ಭಾರತದಲ್ಲಿ ಎಲ್ಲಾ ಭಾಷೆಯ ಲೇಖಕಿಯರನ್ನು ಗೌರವಿಸುವ ಗುಣವಿದೆ ಎಂದರು.

ಎಐಪಿಸಿಯ ಪ್ರಧಾನ ಕಾರ್ಯದರ್ಶಿ  ಜಿ.ಎಸ್.ಸರೋಜ ಪ್ರಾಸ್ತಾವಿಕವಾಗಿ ಮಾತನಾಡಿ,  ಮಹಿಳಾ ಸುರಕ್ಷತೆಯೇ ದೇಶದ ಗೌರವ ಎಂಬ ಧೈಯ ವಾಕ್ಯದೊಡನೆ ಆಯೋಜಿಸಿದ್ದೇವೆ.  ಇದು ರಜತ ಮಹೋತ್ಸವದ ಹೊಸ್ತಿಲಲ್ಲಿದೆ. . ಸಮ್ಮೇಳನದಲ್ಲಿ ಮಹಿಳೆಯರ ಸಮಸ್ಯೆಗಳು, ಸಾಮರಸ್ಯ, ಮಹಿಳಾಶಕ್ತಿ ಕುರಿತಂತೆ ವಿಚಾರ ಸಂಕಿರಣ, ಕವಿಗೋಷ್ಠಿಗಳು ನಡೆಯಲಿವೆ ಎಂದರು.ಸಮ್ಮೇಳನ ಸಮಿತಿಯ ಅಧ್ಯಕ್ಷೆ  ಪ್ರೊ.ಪಿ.ಆರ್. ಮಮತಾ ಅಧ್ಯಕ್ಷತೆ ವಹಿಸಿದ್ದರು.ಉಷಾ ನಟೇಶ್ ಕಾಸರವಳ್ಳಿ ಸ್ವಾಗತಿಸಿದರು. ಗೀತಾಂಜಲಿ ಪ್ರಸನ್ನಕುಮಾರ್ ನಿರೂಪಿಸಿದರು.

Share This Article
";