ಶಿವಮೊಗ್ಗ,ಅ.04: ಚಲನಚಿತ್ರೋತ್ಸವಗಳು ಕಾಟಾಚಾರಕ್ಕಾಗಿ ನಡೆಯಬಾರದು ಎಂದು ವಿಧಾನಪರಿಷತ್ ಸದಸ್ಯೆ ಚಲನಚಿತ್ರ ಕಲಾವಿದೆ ಉಮಾಶ್ರೀ ಹೇಳಿದರು.
ಅವರು ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳ್ಳಿ ಮಂಡಲ, ಚಿತ್ರ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ದಸರಾ ನಡೆಯುತ್ತಿರುವುದು ಅತ್ಯಂತ ಸ್ವಾಗತರ್ಹವಾಗಿದೆ. ಇದು ಹೆಮ್ಮೆಯ ಜಿಲ್ಲೆ ಸಂಸ್ಕಾರಕ್ಕೆ ಹೆಸರಾಗಿದೆ. ಕಲೆ, ಹೋರಾಟ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣಕ್ಕೆ ಹೆಸರುಮಾಡಿದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಪ್ರಸಿದ್ಧವಾಗಿದೆ. ಇದರ ಅಂಗವಾಗಿ ಶಿವಮೊಗ್ಗದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಅದರಲ್ಲಿ ದಸರಾ ಚಲನಚಿತ್ರೋತ್ಸವ ಕೂಡ ಒಂದು. ಆದರೆ ಈ ಚಲನಚಿತ್ರೋತ್ಸವ ಕಾಟಾಚಾರಕ್ಕಾಗಿ ನಡೆಯದೇ ಅರ್ಥಗರ್ಭೀತವಾಗಿ ಸಾರ್ವಜನಿಕರು ಒಳ್ಳೆಯ ಸಿನಿಮಾವನ್ನು ನೋಡಬೇಕಂತಾಗಿದೆ ಎಂದರು.
ಸಿನಿಮಾ ರಂಗ ಇವತ್ತು ಪ್ರಗತಿಯತ್ತ ಸಾಗುತ್ತಿದೆ. ಒಳ್ಳೆಯ ಸಿನಿಮಾಗಳನ್ನು ನೋಡುತ್ತಾರೆ. ಮನೆಯಿಂದ ಜನರನ್ನು ಹೊರಗೆ ಕರೆದುಕೊಂಡು ಬರುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಅದರಲ್ಲೂ ಕನ್ನಡದ ಸಿನಿಮಾಗಳು ಉಳಿಯಬೇಕು. ಇದರಿಂದ ಕಲಾವಿದರೂ ಕೂಡ ಉಳಿಯುತ್ತಾರೆ. ಇಂತಹ ವಾತಾವರಣ ನಿರ್ಮಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದರು.
ಶಿವಮೊಗ್ಗದಲ್ಲಿ ಆಯೋಜಕರು ಮುಂದಿನ ಬಾರಿಯಾದರೂ ಪ್ರತಿಯೊಬ್ಬರು ಒಳ್ಳೆಯ ಚಲನಚಿತ್ರಗಳನ್ನು ನೋಡುವಂತೆ ಆದಾಗ ಮಾತ್ರ ಚಿತ್ರೋತ್ಸವಗಳು ಯಶಸ್ವಿಯಾಗುತ್ತವೆ.
ಇಲ್ಲವಾದರೆ ಇದು ಕಾಟಾಚಾರಕ್ಕೆ ಪ್ರದರ್ಶನಗೊಳುತ್ತದೆ. ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ, ಚಿತ್ರಮಂದಿರದ ಮಾಲೀಕರ ಜೊತೆ ಮಾತನಾಡಿ, ಸಮಯವನ್ನು ಬದಲಾವಣೆ ಮಾಡಿ, ಶ್ರಮಜೀವಿಗಳು ಚಿತ್ರವನ್ನು ನೋಡುವಂತೆ ವಾತಾವರಣ ಕಲ್ಪಿಸಬೇಕು ಎಂದರು ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭೀಮಾ ಚಿತ್ರದ ನಟಿ ಪ್ರಿಯಾ ಶಠಮರ್ಷಣ್ ರಂಗಭೂಮಿ ಕಲಾವಿದ ಅವಿನಾಶ್, ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ, ಬೆಳ್ಳಿಮಂಡಲ ಸಂಚಾಲಕ ವೈದ್ಯನಾಥ್ ಹೆಚ್.ಯು., ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್, ಆಯುಕ್ತೆ ಕವಿತಾ ಯೋಗಪ್ಪನವರ್, ಮುಂತಾದವರು ಇದ್ದರು.