ರಿಪ್ಪನ್ ಪೇಟೆ, ಮೇ.08 : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ಬಸ್ ನಿಲ್ದಾಣದ ತಿರುವಿನಲ್ಲಿ ಬೊಲೆರೋ ಪಿಕಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಶಿವಪುರ ಸಮೀಪದ ಹುಳಿಗದ್ದೆ ಗ್ರಾಮದ ಮಂಜುನಾಥ್ ಕೋಂ ಶೇಖರಪ್ಪ ಶೆಟ್ಟಿ (39) ಮೃತ ದುರ್ಧೈವಿಯಾಗಿದ್ದಾರೆ.ಇವರು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯ ಚಾಲುಕ್ಯ ಬಾರ್ ಮುಂಭಾಗದಲ್ಲಿ ಎಗ್ ರೈಸ್ ಅಂಗಡಿ ನಡೆಸುತಿದ್ದರು.
ಮಂಗಳವಾರ ರಾತ್ರಿ 10 ಗಂಟೆಗೆ ಎಗ್ ರೈಸ್ ಅಂಗಡಿಯನ್ನು ಮುಚ್ಚಿ ಶಿವಪುರದ ತಮ್ಮ ನಿವಾಸಕ್ಕೆ ಟಿವಿಎಸ್ ಸ್ಟಾರ್ ಸಿಟಿ(KA-15 X 9927) ಬೈಕ್ ನಲ್ಲಿ ತೆರಳುತಿದ್ದಾಗ ತೀರ್ಥಹಳ್ಳಿ ಕಡೆಯಿಂದ ಸಾಗರ ಕಡೆಗೆ ತೆರಳುತಿದ್ದ ಬೊಲೆರೋ ಪಿಕಪ್ (KA 17 D 9197) ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮಂಜುನಾಥ್ ಗೆ ಗಂಭೀರ ಗಾಯಗಳಾಗಿತ್ತು ಕೂಡಲೇ ಸ್ಥಳಿಯರ ಸಹಕಾರದಿಂದ ಗಾಯಾಳುವನ್ನು ಮೆಗ್ಗಾನ್ ಗೆ ಕರೆದೊಯ್ಯಲಾಗಿತ್ತು ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.