ಭಾನುವಾರ ಬೆಳಂಬೆಳಗ್ಗೆ ನಿಟ್ಟೂರು ಸಮೀಪ ಮೂರು ವಾಹನಗಳ ನಡುವೆ ಅಪಘಾತ

Kranti Deepa
ವರದಿ: ನಗರ ಹರೀಶ್
ಹೊಸನಗರ , ಅ.23 : ನಗರ ಸಮೀಪದ ನಿಟ್ಟೂರಿನ ಬಳಿ ಸಿಗಂದೂರ ಕ್ರಾಸ್ ಹತ್ತಿರ ಬೆಳಿಗ್ಗೆ 9-30ಕ್ಕೆ, ಹೊಳ್ಳೆಹೊನ್ನೂರಿನ ಬುಲೆರೋ ಪಿಕ್ ಅಪ್ ವಾಹನ ಹಾಗೂ ಕೊಲ್ಲೂರಿನಿಂದ ಬರುತ್ತಿದ್ದ ಬೆಂಗಳೂರಿನ ಬ್ರೀಜಾ ಕಾರ್ ಹಾಗೂ ಬಲೆನೋ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ದುರಾದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಈ ಭಾಗದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ಕಾರಣ ಇಲ್ಲಿನ ರಾನ್ನೇಬೆನ್ನೂರು – ಬೈಂದೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದಾರೆ.ಹಾಗೆಯ ಇದೊಂದು ಅಪಾಯದ ತಿರುವು ಇಲ್ಲಿ ಯಾವುದೇ ರೀತಿಯ ಸೂಚನಾ ಫಲಕ ಇಲ್ಲ.
ಹಾಗೆಯ ಅಲ್ಲಿನ ತಡೆಗೋಡೆ ಒಂದು ಕುಸಿದು ಬಿದ್ದು ವರ್ಷಗಳೇ ಕಳೆದಿದ್ದರೂ ಸಹ ಯಾರೂ ಅದರ ಬಗ್ಗೆ ಗಮನಹರಿಸುತ್ತಿಲ ಎಂದು ಗ್ರಾಮಸ್ಥರು ಅಳಿಲು ತೋಡಿಕೊಂಡಿದ್ದಾರೆ . ಇನಾದರೂ ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ಅಪಘಾತಗಳು ತಡೆಯುವಂತಾಗಲಿ.

Share This Article
";