N. Manjunath

Editor and Owner,
KRANTI DEEPA,


Regional Kannada Daily M.V.Road, Tilak Nagar, Shivamogga-577201, Karnataka State.

Mob: +91 94486-28499, 98445-99699
E-mail: [email protected]


ಕ್ರಾಂತಿದೀಪ ಹೆಸರೇ ಹೇಳುವಂತೆ ವ್ಯವಸ್ಥೆಯಲ್ಲಿನ ಲೋಪಗಳ ಮೇಲೆ ಬೆಳಕು ಚೆಲ್ಲುವ ಮತ್ತು ಸಮಾಜದಲ್ಲಿನ ಅಂಕುಡೊಂಕುಗಳನ್ನು ಚಿಕಿತ್ಸಕ ದೃಷ್ಟಿಕೋನದಿಂದ ನೋಡುವ ಪತ್ರಿಕೆಯಾಗಿದೆ. ಪತ್ರಿಕೆಗಳು ಸಮಾಜದ ಕನ್ನಡಿಯಂತೆ ಇರಬೇಕೆಂಬ ದ್ಯೇಯವನ್ನು ಯಾವತ್ತೂ ಮೈಗೂಡಿಸಿಕೊಂಡು ಬರುತ್ತಿರುವ ಕ್ರಾಂತಿದೀಪ ನಾಲ್ಕು ದಶಕದಿಂದ ನೆಲದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. 1985 ರ ಆಗಸ್ಟ್ 15 ರಂದು ಅಚ್ಚುಮೊಳೆಯಲ್ಲಿ  ಆರಂಭವಾದ ಪತ್ರಿಕೆ 1997 ರಲ್ಲಿಯೇ ಕಂಪ್ಯೂಟರೀಕರಣಗೊಂಡಿತು. ಮಲೆನಾಡಿನ ಜೀವನಾಡಿಯಾಗಿ ಕೆಲಸ ಆರಂಭಿಸಿದ ಪತ್ರಿಕೆ, ಈ ನಾಡಿನ ನೆಲ,ಜಲ, ಪರಿಸರದ ವಿಷಯದಲ್ಲಿ ಶಿವಮೊಗ್ಗ ಜಿಲ್ಲೆಯ ರಾಯಭಾರಿಯಂತೆ ಕೆಲಸ ಮಾಡಿದೆ.

ಮಲೆನಾಡಿನ ಹಲವು ಜೀವಪರ ಹಾಗೂ ವೈಚಾರಿಕ ಹೋರಾಟ ಮತ್ತು ಆಂದೋಲನಗಳಲ್ಲಿ ಒಂದು ಭಾಗವಾಗಿಯೇ ಕ್ರಾಂತಿದೀಪ ಗುರುತಿಸಿಕೊಂಡಿದೆ. 2013 ರಲ್ಲಿ ದಾವಣಗೆರೆ,ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ   ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಪತ್ರಿಕೆ ಮಧ್ಯಕರ್ನಾಟಕದ ಏಕೈಕ ಪ್ರಾದೇಶಿಕ ಪತ್ರಿಕೆಯಾಗಿ ಹೊರಹೊಮ್ಮಿತು. ಕಳೆದ ಎರಡು ವರ್ಷಗಳಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕ್ರಾಂತಿದೀಪ ಓದುಗರ ಕೈ ಸೇರುತ್ತಿದೆ.

ಪ್ರಶಸ್ತಿಗಳು
ಕ್ರಾಂತಿದೀಪ ಪತ್ರಿಕೆ ಸುದ್ದಿನಿಷ್ಟ ನಿಲುವು ಹಾಗೂ ಗುಣಮಟ್ಟಕ್ಕಾಗಿ ಶಿವಮೊಗ್ಗ ಜಿಲ್ಲೆಯ “ಅತ್ಯುತ್ತಮ ಪತ್ರಿಕೆ’ ಎಂದು ಸಂಪಾದಕರ ಸಂಘದಿಂದ ಪುರಸ್ಕರಿಸಲ್ಪಟ್ಟಿತು. ಅದೇ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಉತ್ತಮ ಜಿಲ್ಲಾ ಮಟ್ಟದ ಪತ್ರಿಕೆಗೆ ಕೊಡಮಾಡುವ “ಆಂದೋಲನ’ ಪ್ರಶಸ್ತಿಗೆ ಬಾಜನವಾಯಿತು. ಹಲವು ಸಂಘಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ ಮತ್ತು ಮನ್ನಣೆಗಳಿಸಿದ ಕ್ರಾಂತಿದೀಪ ಪತ್ರಿಕೆ ಸ್ತ್ರೀ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಮಧ್ಯ ಕರ್ನಾಟಕದ ಪ್ರಪ್ರಥಮ ಪ್ರಾದೇಶಿಕ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿ ಮುನ್ನಡೆಯುತ್ತಿದೆ.

ಕಲೆ, ಸಾಹಿತ್ಯ, ರಾಜಕೀಯ, ಅಪರಾಧ, ವಿಜ್ಞಾನ, ಕ್ರೀಡೆ, ಕೃಷಿ, ಲೈಫ್ ಸ್ಟೈಲ್ ಹೀಗೆ ಎಲ್ಲ ಮಾದರಿಯ ಸುದ್ದಿಯ ಹೂರಣವನ್ನು ಪತ್ರಿಕೆ ಒಳಗೊಂಡಿದೆ.


 

";