ಶಿವಮೊಗ್ಗ, ಆ.14 : ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತೊಯ್ದ ಘಟನೆ ರಾಜೇಂದ್ರನಗರ ಮುಖ್ಯ ರಸ್ತೆಯ ಪಾರ್ಕ್ ಬಳಿ ಘಟನೆ ಸಂಭವಿಸಿದೆ.
ಮಂಗಳವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಜೇಂದ್ರನಗರದ ವನಜಾಕ್ಷಿ ಮತ್ತು ಅವರ ಸ್ನೇಹಿತೆ ಉಷಾ ವಾಕಿಂಗ್ ಮಾಡುತ್ತಿದ್ದರು. ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಇವರ ಪಕ್ಕದಲ್ಲಿ ಹಾದು ಹೋಗಿದ್ದ. ಆತ ಹೆಲ್ಮೆಟ್, ಮರೂನ್ ಬಣ್ಣದ ಜರ್ಕಿನ್ ಧರಿಸಿದ್ದ ಎಂದು ಆರೋಪಿಸಲಾಗಿದೆ.
ಹಳೆ ಜೈಲಿನ ಗೇಟ್‌ವರೆಗೆ ಹೋಗಿ ಬೈಕಿನಲ್ಲಿ ಹಿಂತಿರುಗಿದ ಆತ, ವನಜಾಕ್ಷಿ ಅವರ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಿತ್ತೊಯ್ದಿದ್ದಾನೆ. 2.30 ಲಕ್ಷದ 40 ಗ್ರಾಂ ತೂಕದ ಚಿನ್ನದ ಸರ ಕಳುವಾಗಿದೆ ಎಂದು ವನಜಾಕ್ಷಿ ಆರೋಪಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.