ಹೊಸಮನೆ ಚಾನಲ್ ಏರಿ ಮೇಲೆ ಭೀಕರ ಅಪಘಾತ : ಸ್ನೇಹಿತೆಯ ಜೊತೆ ಹೊರಟಿದ್ದ ಯುವಕ ಸಾವು

Kranti Deepa

ಶಿವಮೊಗ್ಗ , ಮಾ.27 : ಕಾರು ಮತ್ತು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು ಕಂಡಿದ್ದಾನೆ. ಸೀಗೆಹಟ್ಟಿಯ ಅಡುಗೆ ಕಂಟ್ರ್ಯಾಕ್ಟರ್ ಚಂದ್ರಶೇಖರ್ ನವರ ಪುತ್ರ ಉಲ್ಲಾಸ್ ಸಾವು ಕಂಡಿದ್ದಾರೆ.

ಸ್ನೇಹಿತೆಯ ಜೊತೆಯಲ್ಲಿ ಜೈಲ್ ರಸ್ತೆಯ ಕಡೆಯಿಂದ ಶರಾವತಿಯ ನಗರ ಕಡೆ ಹೋಗುವಾಗ ಹೊಸಮನೆ ಏರಿಯಾದ ಚಾನೆಲ್ ಏರಿಯಾದ ನಾಗಪ್ಪ ದೇವಸ್ಥಾನದ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.

8-30 ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಉಲ್ಲಾಸ್ (20) ಜೆಎನ್ ಎನ್ ಕಾಲೇಜಿನ ಮೂರನೇ ವರ್ಷದ ಡಿಪ್ಲಮಾ ಓದುತ್ತಿದ್ದು, ಇವರ ತಂದೆ ಚಂದ್ರಶೇಖರ್ ಅಡುಗೆ ಕಂಟ್ರ್ಯಾಕ್ಟರ್ ಆಗಿದ್ದಾರೆ. ಮಗನನ್ನ ಕಳೆದುಕೊಂಡು ಕುಟುಂಬ ಕಣ್ಣೀರಲ್ಲಿ ಕೈತೊಳೆದಿದೆ. ಸ್ನೇಹಿತೆಗೂ ಗಂಭೀರಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
";