ಶಿವಮೊಗ್ಗ, ಫೆ.20 : ಮೀನು ಹಿಡಿಯಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವಮ್ನಪ್ಪಿದ ಘಟನೆ ಚೋರಡಿ ಬಳಿ ಸಂಭವಿಸಿದೆ.
ನೀರಲಗಿ ಹೊಂಡದಲ್ಲಿ ಮೀನು ಹಿಡಿಯಲು ಬೆಸ್ತರು ಬಲೆ ಬೀಸಿದ್ದರು. ಈ ಬೀಸಿದ್ದ ಬಲೆಯಿಂದ ಮೀನು ಹಿಡಿಯಲು ಮುಂದಾದ ಯುವಕ ಶಿವಕುಮಾರ್(30) ಉಸುಕಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.
ಕುಂಸಿಯವನಾದ ಶಿವಕುಮಾರ್ ಮದ್ಯ ವ್ಯಸನ ಮಾಡಿ ಮೀನುಗಳನ್ನು ಹಿಡಿಯಲು ಮುಂದಾಗಿ ಈ ಘಟನೆಗೆ ಕಾರಣನಾಗಿದ್ದಾನೆ ಎಂಬುದು ಕುಟುಂಬಸ್ಥರ ಹೇಳಿಕೆಯಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ.