ಶಿವಮೊಗ್ಗ : ಕೊಲೆ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ಯನ್ನು ಇಲ್ಲಿನ ನನ್ಯಾಯಾಲಯ ವಿಧಿಸಿದೆ. ಪ್ರಕರಣ 2020 ರ ನವೆಂಬರ್ ಒಂದರಂದು ನಡೆದಿತ್ತು.
ಹೆಂಡತಿಯನ್ನು ಸ್ಕೂ ಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿದ ತುಂಗಾ ನಗರ ವ್ಯಾಪ್ತಿಯ ಮಲ್ಲಿಕಾರ್ಜುನ ಬಡಾವಣೆಯ ವಾಸಿ, ಸೈಯದ್ ಫರ್ವೀಜ್ಗೆ ಜೀವಾವಧಿ ಶಿಕ್ಷೆ, ಮತ್ತು ರೂ 25,000/- ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6ತಿಂಗಳುಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಪರ್ವೇಜ್ ಎಂಬಾತ ಫಾತಿಮಾಳನ್ನು ಮದುವೆಯಾಗಿದ್ದು ಮೂವರು ಮಕ್ಕಳಿದ್ದರು. ಇದರ ನಡುವೆ ಪತ್ನಿಯ ಮೇಲೆ ಸಂಶಯ ಪಟ್ಟಿದ್ದ ಪರ್ವೇಜ್ 01-11-2020 ರಂದು ಸಂಜೆ ಫಾತಿಮಾಳನ್ನು ಅವರ ತಂದೆ ತಾಯಿ ಎದುರಲ್ಲೆ ಸ್ಕ್ರೂ ಡ್ರೈವರ್ ಮತ್ತು ಚಾಕುನಿಂದ ಇರಿದು ಹತ್ಯೆ ಮಾಡಿದ್ದ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು ಸಾಕ್ಷಾಧಾರಗಳ ಆಧಾರದ ಮೇಲಿಂದ ಪ್ರಕರಣದಲ್ಲಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.
ಕಲಂ 498(ಎ), 302 ಐ.ಪಿ.ಸಿ ಅಡಿಯಲ್ಲಿ ಎಸಗಿದ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮರುಳಸಿದ್ಧ ಆರಾಧ್ಯ ಸೈಯದ್ ಪರ್ವೇಜ್ ಬಿನ್ ಮುಜೀಬ್ಗೆ ಕಲಂ: 498(ಎ) ಐ.ಪಿ.ಸಿ ಅಡಿಯಲ್ಲಿ ಒಂದು ವರ್ಷ ಶಿಕ್ಷೆ, 5 ಸಾವಿರ ದಂಡ ಮತ್ತು ಕಲಂ 302 ಐ.ಪಿ.ಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ, ಮತ್ತು 20,000/- ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 06 ತಿಂಗಳ ಶಿಕ್ಷೆ ವಿಧಿಸಿ, ಶುಕ್ರವಾರ ತೀರ್ಪು ನೀಡಿದ್ದಾರೆ.