ಶಿವಮೊಗ್ಗ : ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊಸಮನೆ ಬಡಾವಣೆಯ ಚಾನಲ್ ಏರಿ ಮೇಲೆ ಸಂಜೆ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾರ ಮತ್ತು ಓರ್ವ ಯುವತಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಲ್ಲಿ ಕಾರು ಮತ್ತು ಬೈಕ್‌ಗಳ ಮುಂಭಾಗ ನಜ್ಜುಗುಜ್ಜಾಗಿದೆ. ಕಾರು ಶರಾವತಿ ನಗರದಿಂದ ಲಕ್ಷ್ಮೀ ಟಾಕೀಸ್ ಕಡೆಗೆ ತೆರಳುತ್ತಿತ್ತು. ಬೈಕು ಶರಾವತಿ ನಗರದ ಕಡೆಗೆ ತೆರಳುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.