ಕುಂಭಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು

Kranti Deepa

 ಶಿವಮೊಗ್ಗ, ಫೆ. 14 : ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ತೆರಳಲಿಚ್ಛಿಸುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ.

ಫೆಬ್ರವರಿ 22 ರ ಶನಿವಾರ ಸಂಜೆ 4:40 ಕ್ಕೆ ಶಿವಮೊಗ್ಗದಿಂದ (ರೈಲು ಸಂಖ್ಯೆ. 06223 ) ರಂದು ಹೊರಟು ಫೆಬ್ರವರಿ 24 ರ ಬೆಳಿಗ್ಗೆ 11:10 ಕ್ಕೆ ಪ್ರಯಾಗರಾಜ್ ತಲುಪಲಿದೆ ಹಾಗೂ ಫೆಬ್ರವರಿ 25 ರಂದು ಬೆಳಿಗ್ಗೆ 5.40 ಕ್ಕೆ ಪ್ರಯಾಗರಾಜ್‌ನಿಂದ (ರೈಲು ಸಂಖ್ಯೆ 06224) ಫೆಬ್ರವರಿ 27 ರ ಬೆಳಿಗ್ಗೆ 06:45 ಕ್ಕೆ ಶಿವಮೊಗ್ಗ ತಲುಪಲಿದೆ ವಿಶೇಷ ರೈಲು ಚಲಿಸಲಿದ್ದು, ಯಾತ್ರಾರ್ಥಿಗಳು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ. ಫೆಬ್ರವರಿ 15 ರ ಮಧ್ಯಾಹ್ನದ ನಂತರ ವಿಶೇಷ ರೈಲಿನ ಬುಕಿಂಗ್ ಸೇವೆ ಆರಂಭವಾಗಲಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ. 

Share This Article
";