ಶಿವಮೊಗ್ಗ, ಡಿ.29 : ಹೊಸನಗರ ತಾಲೂಕಿನ ಹಾರೋಹಿತ್ತಲು ಸಮೀಪದ ಕಂಬತ್ಮನೆ ಗ್ರಾಮದ ನಿವಾಸಿ ವಾಸುದೇವ ಎಂಬುವವರ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯ ಮೇಲೆ ರಾತ್ರಿ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿದೆ ನಡೆಸಿದೆ.
ಘಟನೆಯ ಸಮಯದ ರಾತ್ರಿಯಾಗಿದ್ದ ಕಾರಣ ಆ ವೇಳೆ ವಿಷಯ ಮನೆಯವರ ಗಮನಕ್ಕೆ ಬಂದಿರಲಿಲ್ಲಿ. ಆದರೆ, ಮುಂಜಾನೆ ನಾಯಿಯ ಮೈಮೇಲೆ ಗಂಭೀರ ಗಾಯಗಳಾಗಿರುವುದನ್ನು ಕಂಡು ಅನುಮಾನಗೊಂಡ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವಿಷಯ ತಿಳಿದಿದೆ.
ಈ ಘಟನೆಯಿಂದಾಗಿ ಹಾರೋಹಿತ್ತಲು, ಕೊಳವಂಕ ಹಾಗೂ ಕಂಬತ್ಮನೆ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ. ಈ ಹಿನ್ನೆಲೆ ಯಾವುದೇ ಜೀವಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು ಹಾಗೂ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
