ಶಿವಮೊಗ್ಗ,ಫೆ .05 : ಪಶ್ಚಿಮ ಸಂಚಾರಿ ಪೊಲೀಸರು ಮತ್ತೊಮ್ಮೆ ಎರಡು ಮಾರು ಉದ್ದದ ರಸೀದಿ ಹರಿದಿದ್ದಾರೆ.ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಕಾರೊಂದರ ಮಾಲೀಕಿನ ಬರೋಬ್ಬರಿ 16 ಸಾವಿರದ ಐನೂರು ರೂಪಾಯಿ ದಂಡ ವಿಧಿಸಿದ್ದಾರೆ.
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಇಲ್ಲಿನ PSI ತಿರುಮಲೇಶ್ ಮತ್ತು ಪ್ರಕಾಶ್ ಎ.ಆರ್.ಎಸ್.ಐ, ಪ್ರವೀಣ್ ಪಾಟೀಲ್ ಹೆಚ್.ಸಿ. ಪ್ರಶಾಂತ್, ಹರೀಶ್ ದಿನೇಶ್ ರವರಿದ್ದ ತಂಡ ಸಾಗರ ರೋಡ್‌ನಲ್ಲಿ ದಿನಾಂಕ 3.2.2025 ರಂದು ವಾಹನ ತಪಾಸಣೆಯನ್ನು ನಡೆಸುತ್ತಿತ್ತು.
ಇಲ್ಲಿನ ಲಕ್ಷ್ಮೀ ಮೆಡಿಕಲ್ ಎದುರು ವಾಹನ ತಪಾಸಣೆ ನಡೆಯುತ್ತಿದ್ದ ವೇಳೆಯಲ್ಲಿ ಕಾರೊಂದರ ದಾಖಲೆ ಹಾಗೂ ಅದರ ನಿಯಮ ಉಲ್ಲಂಘನೆಯ ಹಿಸ್ಟರಿಯನ್ನು ಪರಿಶೀಲಿಸಿದಾಗ ಹಲವು ಸಲ ಕಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ.
ನಗರದಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಸಿಸಿಟಿವಿ ಕ್ಯಾಮರಾಗಳು ಈ ಕಾರಿನ ಸಂಚಾರಿ ನಿಯಮ ಉಲ್ಲಂಘನೆಯ ಹದಿನೈದು ಪ್ರಕರಣಗಳನ್ನ ಫೋಟೋ ಸಮೇತ ದಾಖಲಿಸಿತ್ತು. ಒಟ್ಟಾರೆ ಇವಿಷ್ಟು ಪ್ರಕರಣಗಳಿಗೆ ಸಂಬಂಧಿಸಿದ ಕಾರಿನ ಚಾಲಕರಿಗೆ 16,500 ರೂಪಾಯಿ ದಂಡ ವಿಧಿಸಲಾಗಿದ್ದು, ಅದರ ರಸೀದಿಯು ಬರೋಬ್ಬರಿ ಎರಡು ಮಾರು ಉದ್ದ ಇರುವುದು ಫೋಟೋದಲ್ಲಿ ಗಮನಿಸಿಬಹುದು