ಶಿವಮೊಗ್ಗ, ಸೆ.01 : ಮದ್ಯ ಸೇವನೆ ಮಾಡಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ 10,000 ದಂಡ ವಿಧಿಸಲಾಗಿದೆ. ಆ.25 ರಂದು ವಾಹನಗಳ ತಪಾಸಣೆ ವೇಳೆ ಸರ್ಕಾರಿ ಆಂಬುಲೆನ್ಸ್ ಚಾಲಕನೊಬ್ಬ ಮದ್ಯ ಸೇವಿಸಿರುವ ಅನುಮಾನ ಬಂದಿತ್ತು.
ಆಂಬುಲೆನ್ಸ್ ತಡೆದು ಚಾಲಕನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ೪ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆಂಬುಲೆನ್ಸ್ ಚಾಲಕನಿಗೆ ದಂಡ ವಿಧಿಸಿದೆ.ವಾಹನ ತಪಾಸಣೆ ವೇಳೆ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್, ಸಿಬ್ಬಂದಿ ರಾಜಾಸಾಬ್ ಮತ್ತು ಸುರೇಶ್ ಇದ್ದರು.