ಬಾಗಿಲೇ ಇಲ್ಲದ ಎಟಿಎಂಗೆ ಬೇಕಿದೆ ರಕ್ಷಣೆ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Night; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ,ನ.25 : ಡಿಜಿಟಲ್ ಪೇ ಗಳು ಜಾರಿಯಾದ ನಂತರ ಬ್ಯಾಂಕ್‌ಗಳು ಎಟಿಎಂಗಳಿಗೆ ಭದ್ರತೆ ಕೊಡದೆ ಅವುಗಳನ್ನು ನಿರ್ಲಕ್ಷ್ಯಿಸಿವೆ. ಬಾಗಿಲು, ಸ್ವಚ್ಛತೆ, ರಕ್ಷಣೆ ಇಲ್ಲದೆ, ನಾಯಿ, ಭಿಕ್ಷುಕರು ಬಂದು ಮಲಗುವ ತಾಣಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಲೇ ಇವೆ.

ಆದರೂ ಅವುಗಳತ್ತ ಬ್ಯಾಂಕ್‌ಗಳು ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಚಿತ್ರದಲ್ಲಿರುವ ಎಟಿಎಂ ಉದಾಹರಣೆ.ಇದು ನಗರದ ಓ ಟಿ ರಸ್ತೆಯ ನಾಗಪ್ಪ ಶೆಟ್ಟರ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ.

ಈ ಎಟಿಎಂನ ಬಾಗಿಲು ಕಿತ್ತು ಹೋಗಿ ತಿಂಗಳೇ ಕಳೆದಿದೆ. ಕಿತ್ತ ಬಾಗಿಲನ್ನು ಎಟಿಎಂ ಒಳಗಡೆ ಇಡಲಾಗಿದೆ. ಯಾರ ಕದ್ದೊಯ್ದಯ್ಯದಿರುವುದೇ ವಿಶೇಷ. ಇದರಿಂದ ಇಲ್ಲಿ ಗ್ರಾಹಕರು ಹಣ ತೆಗೆಯಲು ಬಂದರೆ ಅದಕ್ಕೆ ಸುರಕ್ಷತೆ ಇಲ್ಲ. ಎಲ್ಲರೂ ಒಳನುಗ್ಗಬಹುದು. ಒಬ್ಬರು ಹಣ ತೆಗೆಯುವಾಗ ಇನ್ನೊಬ್ಬರು ಅವರ ಪಿನ್ ನಂಬರ್ ಕಾಣಬಹುದು.

ಇತ್ತೀಚೆಗಷ್ಟೇ ಜಿಲ್ಲಾ ಪೊಲೀಸ್ ವರಿಷ್ಠರು ಬ್ಯಾಂಕ್ ಅಧಿಕಾರಿಗಳಿಗೆ ಶಾಖೆ ಮತ್ತು ಎಟಿಎಂನ ಸುರಕ್ಷತೆ ಬಗ್ಗೆ ಸಭೆ ನಡೆಸಿ ಎಚ್ಚರಿಕೆ, ಸೂಚನೆ ಕೊಟ್ಟಿದ್ದರೂ ಇದನ್ನು ಬ್ಯಾಂಕ್ ನಿರ್ಲಕ್ಷಿಸಿದೆ. ಏನಾದರೂ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಎಟಿಎಂ ಬಾಗಿಲನ್ನು ಭದ್ರಗೊಳಿಸುವುದರ ಜೊತೆಗೆ ಯಂತ್ರಕ್ಕೂ ಸೂಕ್ತ ಬಂದೋಬಸ್ತ್ ನೀಡಬೇಕಿದೆ. ಗ್ರ್ರಾಹಕರಿಗೂ ಇದರಿಂದ ಸುರಕ್ಷತೆನ್ನು ನೀಡಿದಂತಾಗುತ್ತದೆ.

Share This Article
";