ತೀರ್ಥಹಳ್ಳಿ, ,ಆ.26 : ಬೈಕ್ ಸವಾರನೋರ್ವ ರಸ್ತೆಯ ಬದಿಯಲ್ಲಿ ಇಟ್ಟಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಆಗುಂಬೆ ರಸ್ತೆಯ ರಾಕ್ ವ್ಯೂ ಹೋಟೆಲ್ ಸಮೀಪ ನಡೆದಿದೆ.
ಕಮ್ಮರಡಿ ಗ್ರಾಮದ ನಿವಾಸಿ ವಿಶ್ವಮೂರ್ತಿ ಗಾಯಗೊಂಡವರು. ಅಡುಗೆ ಕೆಲಸ ಮುಗಿಸಿಕೊಂಡು ತಮ್ಮ ಸ್ಪ್ಲೆಂಡರ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬಂದ ವಾಹನವನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದೆ.ಇದರ ಪರಿಣಾಮ ವಿಶ್ವಮೂರ್ತಿಯವರಿಗೆ ಗಂಭೀರಗಾಯಗಳಾಗಿದ್ದು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.