ಈಜಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆ

Kranti Deepa

ತೀರ್ಥಹಳ್ಳಿ,ನ.20 :  ಈಜಲು ಹೋಗಿ ಕಾಣೆಯಾಗಿದ್ದ ಬ್ಯಾಂಕ್ ಮ್ಯಾನೇಜರ ಶವ ಬುಧವಾರ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಸಿಕ್ಕಿದೆ.

ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್‌ ಬಿಟ್ಟು ನದಿಗೆ ಇಳಿದಿದ್ದರೆಂದು ಊಹಿಸಲಾಗಿದೆ.
ಅಗ್ನಿಶಾಮಕ ದಳದವರ ತೀವ್ರಶೋಧದ ಬಳಿಕ ಬೆಳಗ್ಗೆ ಶವ ಸಿಕ್ಕಿದೆ.

ತಾಲೂಕಿನ ಅರಳಸುರುಳಿಯ ಯೂನಿಯನ್‌ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶ್ರೀವತ್ಸ (38) ಸೋಮವಾರ ಬೆಳಗ್ಗೆ ನದಿಯಲ್ಲಿ ಈಜಲು ಹೋಗಿ ನಂತರ ನಾಪತ್ತೆಯಾಗಿದ್ದರು. ನದಿಯ ದಡದಲ್ಲಿ ಮೊಬೈಲ್, ಬಟ್ಟೆ, ಚಪ್ಪಲಿ ಆಧಾರದಲ್ಲಿ ಅವರು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಲಾಗಿತ್ತು.

ತುಂಗಾ ನದಿಯಲ್ಲಿ ಅಗ್ನಿಶಾಮಕದಳ, ಪೊಲೀಸರು ಸಿಬ್ಬಂದಿಗಳು ಮಂಗಳವಾರ ಸ್ಥಳದಲ್ಲಿ ಹುಡುಕಾಟ ನಡೆಸಿದ್ದರು. ಬ್ಯಾಂಕ್ ಮ್ಯಾನೇಜ‌ರ್ ಒಬ್ಬರೇ ತೀರ್ಥಹಳ್ಳಿಯಲ್ಲಿ ಇದ್ದರು. ಸಂಬಂಧಿಕರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

Share This Article
";