ಶಿವಮೊಗ್ಗ,ಫೆ.11 : ನಗರದಲ್ಲಿ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ಮನೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ಪೊಲೀಸ್ ಇಲಾಖೆ ದಾಳಿ ನಡೆಸಿದೆ. ಒಟ್ಟು 9 ಬಡ್ಡಿಕೋರರ ವಿರುದ್ಧ ಪ್ರಕರಣ ದಾಖಲಿಸಿ, 39 ಲಕ್ಷ ನಗದು ಸೇರಿದಂತೆ ಹತ್ತು ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಎಸ್ ಪಿ ಮಿಥುನ್ ಕುಮಾರ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ ಜಿ. ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಬಾಬು ಆಂಜನಪ್ಪ, ಸಂಜೀವ್ ಕುಮಾರ್ ಟಿ, ಕೃಷ್ಣ ಮೂರ್ತಿ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಸಿಪಿಐ ರವಿ ಪಾಟೀಲ್, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾ ನಗರ ಮಾರ್ನಾಮಿ ಬೈಲು , ಕಾಮಾಕ್ಷಿ ಬೀದಿಯಲ್ಲಿ, ಕೋಟೆ ಸಿಪಿಐ ಹರೀಶ್ ಕೆ ಪಾಟೀಲ್ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ ದಲ್ಲಿ, ವಿನೋಬನಗರ ಸಿಪಿಐ ಚಂದ್ರಕಲಾ ರವರು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪುರದಲ್ಲಿ, ಜಯನಗರ ಸಿಪಿಐ ಸಿದ್ದೇಗೌಡ, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು, ಬಸವನಗುಡಿಯಲ್ಲಿ, ತುಂಗಾನಗರ ಸಿಪಿಐ ಗುರುರಾಜ್ ಕೆ ಟಿ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರದಲ್ಲಿ, ಶಿವಮೊಗ್ಗ ಗ್ರಾಮಾಂತರದ ಸಿಪಿಐ ಸತ್ಯನಾರಾಯಣ ರವರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಬಡಾವಣೆ, ಗುರುಪುರ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ದಾಳಿ ನಡೆಸಿದರು.
ದಾಳಿಯಲ್ಲಿ ಒಟ್ಟು 39 ಲಕ್ಷ ನಗದು, 24 ಮೊಬೈಲ್, 02 ಲ್ಯಾಪ್ ಟಾಪ್, 72 ಚೆಕ್ ಗಳು,19 ಆರ್ಸಿ ಬುಕ್ ಗಳು, 07 ವೆಹಿಕಲ್ ಬಾಂಡ್‌ಗಳು, ಎರಡು ಫಾರ್ಮ್ ನಂ. 29 ಮತ್ತು 20,ಅಗ್ರಿಮೆಂಟ್ ಕಾಪಿ, ಪಾಸ್ ಬುಕ್, ಸೇಲ್ ರೀಡ್, ಪಹಣಿ, 29 ಬೈಕ್, 2 ಕಾರನ್ನು ವಶಪಡಿಸಿಕೊಳ್ಳಲಾಗಿದೆ.9 ಆರೋಪಿತರ ವಿರುದ್ದ 9 ಪ್ರಕರಣ ದಾಖಲಿಸಲಾಗಿದೆ.