ನವದೆಹಲಿ,ಅ.22 : ಇಲ್ಲಿನ ಚಿನಿವಾರ ಪೇಟೆ ಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಕೆ.ಜಿಗೆ ರೂ.1 ಲಕ್ಷ ದಾಟಿದೆ. 10 ಗ್ರಾಂ ಚಿನ್ನದ ದರ ರೂ.3.50 ಏರಿಕೆಯಾಗಿ, ರೂ.81 ಸಾವಿರದಂತೆ ಮಾರಾಟವಾಗಿದೆ.
ಬೆಳ್ಳಿ ಧಾರಣೆಯು ಕೆ.ಜಿಗೆ ರೂ.1,500 ಹೆಚ್ಚಳವಾಗಿ ರೂ.1.01 ಲಕ್ಷಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಎಲೆಕ್ಟ್ರಾನಿಕ್ಸ್, ಸರ್ಕಿಟ್ ಬೋರ್ಡ್, ಸೌರ ಫಲಕ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೈಗಾರಿಕಾ ವಲಯದಿಂದ ಬೇಡಿಕೆ ಹೆಚ್ಚಳವಾಗಿದೆ. ಹಾಗಾಗಿ, ಸತತ ಐದು ದಿನದಿಂದ ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗುತ್ತಿದೆ.