ಶಿವಮೊಗ್ಗ,ಅ.04: ಉದ್ಯಮಿಯೊಬ್ಬರಿಗೆ ಸೇರಿದ ಗೋದಾಮಿನ ಬೀಗವನ್ನು ಹೊಡೆದು ಕಳ್ಳರು ಸುಮಾರು 8, ಲಕ್ಷ ರೂಪಾಯಿ ಮೌಲ್ಯದ 20 ಚೀಲ ಅಡಕೆ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದ ಆರ್ ಎಂಎಲ್ ನಗರದಲ್ಲಿ ನಡೆದಿದೆ.
ದೂರುದಾರರು ಅಡಿಕೆಯನ್ನು ಸಿಪ್ಪೆ ಸುಲಿದು, ಶಿವಮೊಗ್ಗದ ಬಾಬು ಆರ್.ಎಂ.ಎಲ್. ನಗರದಲ್ಲಿರುವ ತಮ್ಮ ಮಳಿಗೆಯಲ್ಲಿ ಇರಿಸಿದ್ದರು.ಸುಮಾರು 3 ತಿಂಗಳ ಹಿಂದೆ ಬೆಳೆದಿದ್ದ ಈ ಅಡಿಕೆಯನ್ನು ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸಲು ಸ್ಥಳಾವಕಾಶದ ಇಲ್ಲದೇ ಇದುದ್ದರಿಂದ. ಸೆಪ್ಟೆಂಬರ್ 21, 2025ರಂದು ಬೆಳಿಗ್ಗೆ ತಮ್ಮ ಮಳಿಗೆಯಿಂದ ಅನುಪಿನಕಟ್ಟೆಯಲ್ಲಿರುವ ಶೀಟಿನ ಗೋಡೌನ್‌ಗೆ ಹಾಕಿಸಿದ್ದರು.
ಈ ಅಡಿಕೆಯನ್ನು ನೋಡಿಕೊಳ್ಳಲು ಪರಿಚಯಸ್ಥರೊಬ್ಬರಿಗೆ ಜವಬ್ದಾರಿಯನ್ನು ವಹಿಸಿದ್ದರು.ಆ ಪರಿಚಯಸ್ಥರು ಸೆಪ್ಟೆಂಬರ್ 22, ರಾತ್ರಿ ಸುಮಾರು 8:00 ಗಂಟೆಯವರೆಗೆ ಗೋಡೌನ್‌ನಲ್ಲಿ ಇದ್ದು, ನಂತರ ಬೀಗ ಹಾಕಿ ಹೋಗಿದ್ದರು. ಮರುದಿನ, ಸೆಪ್ಟೆಂಬರ್ 23, 2025ರ ಮಧ್ಯಾಹ್ನ ಸುಮಾರು 1:00 ಗಂಟೆಗೆ ಗೋಡೌನ್ ಬಳಿ ಹೋದಾಗ, ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಒಡೆದಿರುವುದು ಕಂಡುಬಂದಿದೆ.
ಬಾಗಿಲು ತೆಗೆದು ಒಳಗೆ ಹೋಗಿ ಪರಿಶೀಲಿಸಿದಾಗ, ದೂರುದಾರರರಿಗೆ ಶಾಕ್ ಎದುರಾಗಿದ್ದು, ಗೋಡೌನ್‌ನಲ್ಲಿದ್ದ ಅಡಿಕೆ ತುಂಬಿದ ಒಟ್ಟು 20 ಚೀಲಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.