200 ಕೆಜಿ ಗೊಮಾಂಸ ಪತ್ತೆ: ಓರ್ವ ಸೆರೆ

Kranti Deepa

ಶಿವಮೊಗ್ಗ,ಡಿ.20 : ಅಕ್ರಮ ಕಸಾಯಿ ಖಾನೆಯ ಮೇಲೆ ಶಿರಾಳಕೊಪ್ಪ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದಾರೆ. ದಾಳಿಯಲ್ಲಿ 200 ಕೆಜಿ ಗೋ ಮಾಂಸವನ್ನು ಪತ್ತೆಯಾಗಿದೆ.

ನಿನ್ನೆ ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದಲ್ಲಿರುವ ಕಸಾಯಿ ಖಾನೆಯಲ್ಲಿ ಗೋಹತ್ಯೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇರೆಗೆ ಪಿಎಸ್‌ಐ ಪ್ರಶಾಂತ್ ಕುಮಾರ್ ಟಿಬಿ ಮತ್ತು ಸಿಬ್ಬಂದಿಗಳು ಧಾಳಿ ಮಾಡಿದ್ದಾರೆ. ದಾಳಿಯಲ್ಲಿ ಪರವಾನಗಿ ಇಲ್ಲದೆ ಕಸಾಯಿ ಖಾನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ತಬ್ರೇಜ್ ಎಂಬ ಆರೋಪಿತನನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿತನಿಂದ 200 ಕೆಜಿ ಮಾಂಸವನ್ನು ವಶಕ್ಕೆ ಪಡೆದು ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

Share This Article
";