ಶಿವಮೊಗ್ಗ,ಅ.19: ಮನೆ ಮುಂದೆ ಇಟಿದ್ದ 2 ಕ್ವಿಂಟಾಲ್ ಅಡಿಕೆ ರಾತ್ರೋ ರಾತ್ರಿ ಕಳುವಾಗಿದೆ. ಭದ್ರಾವತಿ ತಾಲೂಕು ಸಿದ್ಲಿಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಅಮಿತ್ ಎಂಬುವವರು ತಮ್ಮ ತೋಟದಲ್ಲಿ ಅಡಿಕೆ ಕೊಯಿಸಿ, ಬೇಯಿಸಿ, ಒಣಗಿಸಿ ಮನೆ ಬಳಿ ಇರಿಸಿದ್ದರು. ಒಟ್ಟು 7 ಚೀಲ ಅಡಿಕೆಯನ್ನು ಮನೆ ಮುಂಭಾಗ ಇರಿಸಿ ದ್ದರು.
ಬೆಳಗ್ಗೆ 4 ಗಂಟೆಗೆ ಎದ್ದು ನೋಡಿದಾಗ ಮೂರು ಚೀಲ ಅಡಿಕೆ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿ ಬಳಿಕ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
ಮೂರು ಚೀಲಗಳಲ್ಲಿ ಒಟ್ಟು 2 ಕ್ವಿಂಟಾಲ್ 10 ಕೆ.ಜಿ.ಯಷ್ಟು ಒಣ ಅಡಿಕೆ ಇತ್ತು. ಇದರ ಮೌಲ್ಯದ 1.08 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪೊಲೀ ಸರು ತನಿಖೆ ನಡೆಸುತ್ತಿದ್ದಾರೆ.