ಶಿವಮೊಗ್ಗ,ಅ.19: ಪೊಲೀಸ್ ಇಲಾಖೆ ಸಂಚಾರ ನಿಯಮಗಳನ್ನ ಕಟ್ಟು ನಿಟ್ಟು ಜಾರಿಗೊಳಿಸುವುದರ ಜೊತೆ ದಂಡ ವಸೂಲಿ ಯಲ್ಲಿ ಹೆಚ್ಚು ಶಿಸ್ತನ್ನ ಮೂಡಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾರು ಮಾಲೀಕನೊಬ್ಬರಿಗೆ ಬರೋಬ್ಬರಿ 11 ಸಾವಿರ ರೂಪಾಯಿ ದಂಡ ವಿಸಲಾಗಿದೆ.
ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾರೊಂ ದರ ದಾಖಲೆಗಳನ್ನ ಪರಿಶೀಲಿಸಿದ್ದಾರೆ.
ಈ ವೇಳೇ ಕಾರಿನ ಮೇಲೆ ಹಲವು ದಂಡಗಳು ಇರುವುದು ಗಮನಕ್ಕೆ ಬಂದಿದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ದಂಡದ ಮೊತ್ತವೇ 11,000 ಇರುವುದು ಗೊತ್ತಾಗಿದೆ.
ಹೀಗಾಗಿ ವಾಹನ ಮಾಲೀಕರಿಂದ ಪೂರ್ಣ ದಂಡದ ಮೊತ್ತವನ್ನು ಕಟ್ಟಿಸಿಕೊಂಡು ಅವರಿಗೆ ರಸೀದಿ ನೀಡಿದ್ದಾರೆ.