ಹೋರಿ ಹಬ್ಬ: 10 ಜನ ಆಸ್ಪತ್ರೆಗೆ ದಾಖಲು

Kranti Deepa

ಶಿವಮೊಗ್ಗ,ನ .04 :ಹೋರಿ ಹಬ್ಬಕ್ಕೆ ಹೋದ ಸಂದರ್ಭದಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡ ಪ್ರಕರಣಗಳು ಒಂದೇ ದಿನ ನಡೆದ ಬಗ್ಗೆ ವರದಿಯಾಗಿವೆ ಎರಡು ಪ್ರಕರಣಗಳು ಮೆಗ್ಗಾನ್ ಗೆ ಬಂದು ದಾಖಲಾಗಿದೆ.

ಜಿಲ್ಲೆಯ 12 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭಾನುವಾರ ಹೋರಿ ಹಬ್ಬ ನಡೆದಿದೆ. ಸೊರಬದ ಯುವಕ ಸಂದೀಪ ಎಂಬಾತ ಶಿಕಾರಿಪುರದ ಹೋರಿಹಬ್ಬ ನೋಡಲು ಹೋದಾಗ ಹೋರಿ ತಿವಿದಿದೆ. ನಾಗರಾಜ್ ಎಂಬಾತನ ಬಾಯಿಗೆ ತಿವಿದ ಹೋರಿ ಬಾಯಿಯನ್ನು ಸೀಳಿದೆ. ಹೋರಿ ಹಿಡಿಯಲು ಹೋದ ರಂಗನಾಥ್ ಎಂಬ ಯುವಕ ಕಾಲು ಮುರಿದುಕೊಂಡಿದ್ದಾನೆ. ಈತ ಮೆಗ್ಗಾನ್ ಗೆ ದಾಖಲಾಗಿದ್ದಾನೆ.

ರುದ್ರೇಶ ಪ್ಪ ಎನ್ನುವವರ ಕಿವಿ ಕಟ್ ಆಗಿದೆ. ಹೋರಿ ಹಿಡಿಯಲು ಹೋದ ಆಂಜನೇಯೆಂಬಾತನ ಎದೆಯ ಭಾಗಕ್ಕೆ ತಿವಿದಿದೆ. ಮಾದೇನಹಳ್ಳಿಯ ಸುನೀಲ್ ಎಂಬುವರಿಗೂ ಗಂಭೀರ ಗಾಯವಾಗಿದ್ದು ಇವರೆಲ್ಲೂ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಇವೆಲ್ಲಾ ಪ್ರಕರಣಗಳು ಶಿಕಾರಿಪುರ ತಾಲೂಕಿನದವಾಗಿದೆ. ಆದರೆ ಯಾವುದೂ ಪ್ರಾಣ ಹಾನಿ ಸಂಭವಿಸಿಲ್ಲ.

Share This Article
";