ಮೂರ್ಛೆ ರೋಗಕ್ಕೆ ತುತ್ತಾಗಲಿದ್ದ ಏಳು ತಿಂಗಳ ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡಿಸಿದ ನಾರಾಯಣ ಆಸ್ಪತ್ರೆ

Kranti Deepa

ಶಿವಮೊಗ್ಗ,ಡಿ.11 : ಏಳು ತಿಂಗಳ ಗರ್ಭಿಣಿ  ತೀವ್ರವಾದ ಅಧಿಕ ರಕ್ತದೊತ್ತಡದಿಂದಾಗಿ ’ಎಕ್ಲಾಂಪ್ರಿಯಾ’ (ಭಾರೀ ಮೂರ್ಛ ಬರುವ ಸ್ಥಿತಿ) ಅಪಾಯದಲ್ಲಿದ್ದುದನ್ನು ತಕ್ಷಣವೇ ತುರ್ತು ಚಿಕಿತ್ಸೆ  ಮೂಲಕ ಹೈ-ರಿಸ್ಕ್ ಗರ್ಭಾವಸ್ಥೆಗಳನ್ನು ನಿಭಾಯಿಸಿ  ತಾಯಿಯ ಜೀವ ಉಳಿಸಲು ತುರ್ತಾಗಿ ಶಸ್ತ್ರಚಿಕಿತ್ಸೆ (ಸಿಸೇರಿಯನ್ ) ಮಾಡಿ ಮಗುವನ್ನು ನಾರಾಯಣ ಮಲ್ಟಿ ಸ್ಪಾ ಶಾಲ ಆಸ್ಪತ್ರೆಯ ವೈದ್ಯರು ಹೊರತೆಗೆದು ಇಬ್ಬರ ಜೀವವನ್ನೂ ಉಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಆಸ್ಪತ್ರೆಯ  ಹಿರಿಯ ಸ್ತ್ರೀ ರೋಗ ತಜ್ಞ ಡಾ|| ರಾಘವೇಂದ್ರ ಭಟ್ಟ, ಆಸ್ಪತ್ರ್ರೆಗೆ ಕರೆತಂದಾಗ  ಕೇವಲ 1 ಕೆ.ಜಿ ತೂಕದ ಅವಧಿಪೂರ್ವ  ಶಿಶುವಿಗೆ ಆ ತಾಯಿ ಜನ್ಮ ನೀಡಿದರು. ತಕ್ಷಣವೇ ಅಗತ್ಯ ಪರೀಕ್ಷೆಗಳನ್ನು ನಡೆಸಲಾಯಿತು. ವಿವಿಧ ಪರೀಕ್ಷೆ ಮಾಡಿದಾಗ ಅವರಿಗೆ ತೀವ್ರವಾದ ’ಪ್ರೀ-ಎಕ್ಲಾಂಪ್ರಿಯಾ’ ಇತ್ತು ಮತ್ತು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಿದ್ದ ’ರೆಟಿನಾ ಡಿಟ್ಯಾಚ್ ಮೆಂಟ್’ (ಕಣ್ಣಿನ ಪರದೆಯ ಬೇರ್ಪಡಿಕೆ) ಸಮಸ್ಯೆ ಇತ್ತು. ಕೂಡಲೇ ನಿರ್ಧಾರ ತೆಗೆದುಕೊಂಡು ತಾಯಿಯ ಜೀವ ಉಳಿಸಲು ತುರ್ತಾಗಿ ಶಸ್ತ್ರಚಿಕಿತ್ಸೆ (ಸಿಸೇರಿಯನ್ ) ಮಾಡಿ ಮಗುವನ್ನು ಹೊರತೆಗೆಯಲು ತೀರ್ಮಾನಿಸಲಾಯಿತು ಎಂದರು.

ನಂತರ  ತಾಯಿ ಮತ್ತು ಮಗು ಇಬ್ಬರೂ ಐಸಿಯುನಲ್ಲಿ  ತೀವ್ರ ಆರೋಗ್ಯ ಸವಾಲುಗಳನ್ನು ಎದುರಿಸಿದರು. ಇದೇ ವೇಳೆ ತಾಯಿಗೆ  ಮೆದುಳಿನ ತೊಂದರೆಯಾದ ’ಎನ್ಸೆಫಲೋಪತಿ’ ಕಾಣಿಸಿಕೊಂಡಾಗ,  ಆಸ್ಪತ್ರೆ ಯ ನರರೋಗ ತಜ್ಞೆ ಡಾ|| ರೂಪಾ  ಅದನ್ನೂ ಯಶಸ್ವಿಯಾಗಿ ಸರಿಪಡಿಸಿದರು. ಐಸಿಯುನಲ್ಲಿ ನಾಲ್ಕು ದಿನ ಇದ್ದ ನಂತರ, ತಾಯಿಯನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಮೂರು ದಿನಗಳಲ್ಲಿ ಆಕೆಯ ದೃಷ್ಟಿ ಸುಧಾರಿಸಿ ಅವರು ಮನೆಗೆ ಹೋದರು ಎಂದು ಮಾಹಿತಿ ನೀಡಿದರು.

ಮಗು 45 ದಿನ ಐಸಿಯುನಲ್ಲಿ
ಅವಧಿ ಪೂರ್ವ ಜನಿಸಿದ ಮಗುವಿನ ಬಗ್ಗೆ ಮಾತನಾಡಿದ  ಶಿಶು ರೋಗ ತಜ್ಞ ಡಾ!!  ಶಶಿಧರ್ ಹೆಗಡೆ, ತನ್ನ  ಮೇಲ್ವಿಚಾರಣೆಯಲ್ಲಿ ಎನ್‌ಐಸಿಯುನಲ್ಲಿ ಮಗುವನ್ನು ಇಡಲಾಯಿತು. ಮಗುವಿನ ಬಹುತೇಕ ಅಂಗಗಳು ಪೂರ್ಣವಾಗಿ ಬೆಳೆದಿಲ್ಲದ ಕಾರಣ, ಅದನ್ನು ಸುಮಾರು 45 ದಿನಗಳ ಕಾಲ ತೀವ್ರ ನಿಗಾದಲ್ಲಿ ಇಡಬೇಕಾಯಿತು. ಹೃದಯ ಬಡಿತ ಕಡಿಮೆ ಇತ್ತು, ಉಸಿರಾಡಲು ಕಷ್ಟವಿತ್ತು. ಹಾಗಾಗಿ, ಮಗುವನ್ನು ನಿರಂತರ ಆಮ್ಲಜನಕ ಬೆಂಬಲದೊಂದಿಗೆ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಒಮ್ಮೆ ಹೃದಯ ಬಡಿತ ನಿಂತಾಗ ಸಿಪಿಆರ್  ನೀಡಿ ಮತ್ತೆ ಚೇತರಿಸಿಕೊಂಡಿತು ಎಂದರು.

ಮಗುವಿನ ಹೃದಯದಲ್ಲಿ ರಂಧ್ರವಿತ್ತು. ಅದನ್ನು ಔಷಧಿಗಳ ಮೂಲಕವೇ ಸರಿಪಡಿಸಲಾಯಿತು. ರಕ್ತದ ಮಟ್ಟ ಕಡಿಮೆಯಾಗಿದ್ದರಿಂದ ರಕ್ತವನ್ನೂ ನೀಡಲಾಯಿತು. ಅತಿ ಕಡಿಮೆ ತೂಕದ ಮಗುವಾಗಿದ್ದರಿಂದ, ಕೆಲವೊಮ್ಮೆ ಮೆದುಳಿನ ಅಪಕ್ವತೆಯಿಂದ ಉಸಿರಾಟ ನಿಲ್ಲಿಸುವ ತೊಂದರೆಯೂ ಇತ್ತು. ಸಿಬ್ಬಂದಿಯ ಕಾಳಜಿಯಿಂದ, ಮಗುವು ಸ್ಥಿರವಾಗಿ, ಆಟವಾಡುತ್ತಾ, ಸುಮಾರು 1.8 ಕೆಜಿ ತೂಕದೊಂದಿಗೆ ಒಂದೂವರೆ ತಿಂಗಳ ನಂತರ ಆಸ್ಪತ್ರೆಯಿಂದ ಮನೆಗೆ ಮಗು ತೆರಳಿದೆ” ಎಂದು ಅವರು ಸಂತಸ ಹಂಚಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಎಸ್ ಎಂ ಶೈಲೇಶ್ ಹಾಜರಿದ್ದರು.

Share This Article
";