ಅಬಕಾರಿ ದಾಳಿ: 51.75 ಲೀ ಗೋವಾ ಮದ್ಯ ಪತ್ತೆ

Kranti Deepa

ಶಿವಮೊಗ್ಗ, ಡಿಸೆಂಬರ್.11 : ಶಿವಮೊಗ್ಗ ತಾಲೂಕು ಗೋವಿಂದಪುರ ಗ್ರಾಮದ ಶಿವಕುಮಾರ್ ಬಿನ್ ವರದರಾಜ್ ಇವರಿಗೆ ಸೇರಿದ ಶೆಡ್ ಮೇಲೆ ಶಿವಮೊಗ್ಗ ಅಬಕಾರಿ ಇಲಾಖೆ ಸಿಬ್ಬಂದಿಗಳು ಡಿ.10 ರಂದು ದಾಳಿ ನಡೆಸಿ, ಅನಧಿಕೃತವಾಗಿ ಮಾರಾಟ ಮಾಡುವ ಸಲುವಾಗಿ ದಾಸ್ತಾನು ಮಾಡಿದ್ದ 51.75 ಲೀ ಗೋವಾ ಮದ್ಯವನ್ನು ವಶಪಡಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಅಬಕಾರಿ ನಿರೀಕ್ಷಕ ಶ್ರೀನಾಥ್ ಆರ್. ರವರ ನೇತೃತ್ವದಲ್ಲಿ ಪುಟ್ಟಪ್ಪ-ಅ.ಉ.ನಿ, ಶಿವಮೂರ್ತಿ ನಾಯ್ಕ್, ಗಣಪತಿ ಮತ್ತು ಅರ್ಜುನ್ ಇವರುಗಳು ಈ ದಾಳಿಯನ್ನು ನಡೆಸಿರುತ್ತಾರೆ.

Share This Article
";